ಹುಬ್ಬಳ್ಳಿ :ತಾಲೂಕಿನ ಇನಾಮವಿರಾಪುರದಲ್ಲಿ ನಡೆದ ಗರ್ಭಿಣಿ ಮಹಿಳೆಯ ಹತ್ಯೆ ಖಂಡಿಸಿ ಜೈ ಭೀಮ ಯುವ ಶಕ್ತಿ ಸೇನಾ (ರಿ) ಮಾನ್ಯ ತಹಸೀಲ್ದಾರ ರವರಿಗೆ ಮನವಿ ಸಲ್ಲಿಸಿದರು.
ಅನ್ಯ ಜಾತಿಯ ಯುವಕನನ್ನು ಮದುವೆಯಾಗಿರುವದನ್ನು ಸಹಿಸಲಾರದೇ ಸ್ವಂತ ತಂದೆ ಹಾಗೂ ಸಂಬಂಧಿಕರು ಸೇರಿಕೊಂಡು ಗರ್ಭಿಣಿ ಹೆಣ್ಣು ಮಗಳನ್ನು ಹತ್ಯೆ ಮಾಡಿದ್ದಾರೆ, ನಂತರ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದರು ಕೂಡ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದು ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆಗೆ ಸಂಬಂದಿಸಿದ ಎಲ್ಲಾ ಕಾರಣಿಕರ್ತರನ್ನು ಕೂಡಲೇ ಗಲ್ಲು ಶಿಕ್ಷೆಗೆ ಕೊಡಬೇಕು ಎಂದು ಜೈ ಭೀಮ ಯುವ ಶಕ್ತಿ (ರಿ)ಘಟಕ ಹುಬ್ಬಳ್ಳಿಯ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ.

ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಹರೀಶ್ ಏನ್ ಗುಂಟ್ರಾಳ,ಹಲವಾರು ಯುವಕರು ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.
ವರದಿ: ವಿನಾಯಕ ಗುಡ್ಡದಕೇರಿ




