Ad imageAd image

ಬೆಳೆಹಾನಿ ಪರಿಹಾರ ನೀಡಲು ಆಗ್ರಹ

Bharath Vaibhav
ಬೆಳೆಹಾನಿ ಪರಿಹಾರ ನೀಡಲು ಆಗ್ರಹ
WhatsApp Group Join Now
Telegram Group Join Now

ಸೇಡಂ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಎಲ್ಲಾ ಮುಂಗಾರು ಬೆಳೆಗಳು ಸಂಪೂರ್ಣ ಹಾನಿಯಾಗಿದೆ.

ಹೀಗಾಗಿ ರಾಜ್ಯ ಸರಕಾರ ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಮಹಾದೇವ ನೇರೆಟ್ಟಿ ಕೋಡ್ಲಾ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿವೆ ಹೀಗಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೈಮಾನಿಕ ಸಮೀಕ್ಷೆ ನಡೆಸಿ ತಿಂಗಳಾದರೂ ರೈತರ ಖಾತೆಗೆ ಪರಿಹಾರ ಜಮೆ ಆಗಿಲ್ಲ ಎಂದು ಅವರು ದೂರಿದ್ದಾರೆ.

ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಭಾರಿ ಮಳೆಗೆ ಎಲ್ಲಾ ಮುಂಗಾರು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ವಾರದಲ್ಲಿ ರೈತರಿಗೆ ಪರಿಹಾರ ಬರುತ್ತವೆ ಎಂದು ಎಲ್ಲಾ ರೈತರು ಕಾದು ಕುಳಿತ್ತಿದ್ದಾರೆ. ಆದರೆ, ತಿಂಗಳು ಕಳೆದರೂ ಇದುವರೆಗೆ ಯಾವ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಸರಕಾರ ಕೂಡಲೇ ಅನ್ನದಾತರ ಖಾತೆಗೆ ಹಣ ಹಾಕಬೇಕು ಎಂದು ಮಹಾದೇವ ನೇರೆಟ್ಟಿ ಕೋಡ್ಲಾ ಅವರು ಒತ್ತಾಯಿಸಿದ್ದಾರೆ.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!