ಸಿಂಧನೂರು:- ಇತಿಹಾಸ ಗೊತ್ತಿಲ್ಲದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಬಹುಸಂಖ್ಯಾತರ ಮತಗಳಿಗಾಗಿ ಇಂದು ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವಂತಹ ಕೆಲಸವನ್ನು ಇತ್ತೀಚಿನ ದಿನಮಾನಗಳಲ್ಲಿ ತುಂಬನೇ ಮಾಡುತ್ತಾ ಬಂದಿರುತ್ತಾರೆ .
ಇತಿಹಾಸ ಪುಟಗಳಲ್ಲಿ ಮೈಸೂರು ಹುಲಿ ಎಂದು ಕೇಳಿದರೆ ಅದಕ್ಕೆ ಉತ್ತರ ಟಿಪ್ಪುಸುಲ್ತಾನ್ ಎಂದು ಹೇಳುತ್ತಾರೆ ಇದಲ್ಲದೆ ಟಿಪ್ಪು ಸುಲ್ತಾನ್ ಆಡಳಿತದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಾವು ಇತಿಹಾಸ ಪುಟದಲ್ಲಿ ಕಾಣಬಹುದು ಟಿಪ್ಪು ಸುಲ್ತಾನ್ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಎಂದು ಅವರ ಹೆಸರನ್ನು ಹೊಂದಿರುವ ಕಲ್ಲಿನ ನಾಮ ಫಲಕದಿಂದ ಕಾಣಬಹುದು ಹಾಗೂ ಟಿಪ್ಪು ಸುಲ್ತಾನ್ ಅವರ ಕೊಡುಗೆ ವಿಜ್ಞಾನ ಕ್ಷೇತ್ರಕ್ಕೆ ಅಪಾರವಾಗಿದೆ.
ದಲಿತರ ಮೇಲಿನ ಬಹಿಷ್ಕಾರವನ್ನು ತೀವ್ರವಾಗಿ ಖಂಡಿಸಿ ಅದನ್ನು ತೊಡೆದು ಹಾಕಿದರು ಇಂಥ ಮಹಾನ್ ನಾಯಕನಿಗೆ ದಿನಾಂಕ : 19 /9/ 2024 ರಂದು ಅವಿವೇಕಿ ಬಸನಗೌಡ ಪಾಟೀಲ್ ಯತ್ನಾಳ್ ಮುಧೋಳ್ ನಗರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಅವರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ರವರ ಮೇಲೆ ಕಾನೂನು ಕ್ರಮ ಜರಗಿಸಿ ಶಾಸಕ ಸ್ಥಾನದಿಂದ ಮಜಗೊಳಿಸಿ ಈ ರಾಜ್ಯದಿಂದ ಗಡಿಪಾರು ಮಾಡಬೇಕೆಂದು.
ಮಾನ್ಯ ತಹಶೀಲ್ದಾರರು ಸಿಂಧನೂರು ಇವರ ಮುಖಾಂತರ
ಗೌರವಾನ್ವಿತ ರಾಜ್ಯಪಾಲರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ
“ದಲಿತ ಹಿಂದುಳಿದ ಅಲ್ಪಸಂಖ್ಯಾತರ ಯುವಕರ ಒಕ್ಕೂಟ’ ಸಿಂಧನೂರು ಇವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ -: ಹನುಮಂತ ಕರ್ನಿ.. ಯಾಸೂಪ್ ಯಾತ್ಮರಿ.. ಹಬೀಬ್ ಖಾಜಾ.. ದಾವುದ್ ಆಸ್ಮಿ.. ರಮೇಶ್ ಬಪ್ಪುರ್.. ಖಾಜಾ ಮಲ್ಲಿಕ್.. ಅಬ್ದುಲ್ ಕರೀಂ.. ಸೋಹಿಲ್ ದೇಸಾಯಿ.. ದಾವಲ್ ಸಾಬ್ ದೊಡ್ಡಮನಿ ಇನ್ನು ಅನೇಕರು ಇದ್ದರು
ವರದಿ:- ಬಸವರಾಜ ಬುಕ್ಕನಹಟ್ಟಿ