ಸಿರುಗುಪ್ಪ ನಗರದಲ್ಲಿ ಹೆಚ್ಚಿರುವ ದೂಳು ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ

Bharath Vaibhav
ಸಿರುಗುಪ್ಪ ನಗರದಲ್ಲಿ ಹೆಚ್ಚಿರುವ ದೂಳು ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ
WhatsApp Group Join Now
Telegram Group Join Now

ಸಿರುಗುಪ್ಪ : ನಗರದಲ್ಲಿನ ಅಕ್ಕಿ ಗಿರಣಿಗಳಿಂದಾಗುವ ವಾಯು ಮಾಲಿನ್ಯ ಮತ್ತು ದೂಳು ನಿಯಂತ್ರಣದ ಬಗ್ಗೆ ಕ್ರಮವಹಿಸಬೇಕೆಂದು ಒತ್ತಾಯಿಸಿ ತಾಲೂಕು ಕಛೇರಿಯಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆ ತಾಲೂಕು ಘಟಕದಿಂದ ತಹಶೀಲ್ದಾರ್ ಹೆಚ್.ವಿಶ್ವನಾಥ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ.ಹೆಚ್.ವಿ ಮಾತನಾಡಿ ಸಿರುಗುಪ್ಪ ನಗರದ ಆದೋನಿ ರಸ್ತೆ ಮತ್ತು ಸಿಂಧನೂರು ರಸ್ತೆಯ ಪಕ್ಕದಲ್ಲಿರುವ ಅಕ್ಕಿಗಿರಣಿಗಳಿಂದಾಗಿ ಆ ರಸ್ತೆಗಳ ಮಾರ್ಗವಾಗಿ ದಿನನಿತ್ಯ ಸಂಚರಿಸುವ 50ಕ್ಕೂ ಅಧಿಕ ಹಳ್ಳಿಗಳ ಜನರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

ಸಾವಿರಾರು ಜನರು ತಮ್ಮ ವಿವಿಧ ಕಾರ್ಯಗಳಿಗಾಗಿ ಬೈಸಿಕಲ್, ಬೈಕ್ ಇನ್ನಿತರ ವಾಹನಗಳ ಮೂಲಕ ನಗರಕ್ಕೆ ಬರುತ್ತಿದ್ದು, ಅಕ್ಕಿಗಿರಣಿಗಳಿಂದ ಹೊರಸೂಸುವ ಭತ್ತದ ಹೊಟ್ಟು ಮತ್ತು ಕಪ್ಪು ಬೂದಿಯು ಕಣ್ಣಿಗೆ ತಗುಲಿ ಅನೇಕ ಅಪಘಾತಗಳು ಜರುಗುತ್ತಿವೆ.

ಅಲ್ಲದೇ ವಾತಾವರಣವೆಲ್ಲಾ ದೂಳಿನಿಂದ ಕಲುಷಿತಗೊಂಡು ಜನರಿಗೆ ಕಣ್ಣು ಮತ್ತು ಶ್ವಾಸಕೋಸದ ತೊಂದರೆಯುಂಟಾಗುತ್ತದೆ. ಅಕ್ಕಿಗಿರಣಿಗಳ ಮಾಲಿಕರ ನಿರ್ಲಕ್ಷ್ಯದಿಂದಾಗಿ ಎಲ್ಲರೂ ತೊಂದರೆಪಡುವಂತಾಗಿದೆ.

ಆದ್ದರಿಂದ ತಾವುಗಳು ದೂಳು ನಿರ್ವಹಣೆಗೆ ಅಗತ್ಯ ಕ್ರಮಕೈಗೊಂಡು ದೂಳು ನಿಯಂತ್ರಣಕ್ಕೆ ಸಂಬಂದಿಸಿದ ಇನ್ನಿತರ ಇಲಾಖೆಗಳಿಗೆ ಸೂಚನೆ ನೀಡುವ ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟಬೇಕು.

ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯೊಂದಿಗೆ ಇನ್ನಿತರ ಸಂಘಟನೆಗಳ ಮೂಲಕ ಧರಣಿ ಕೂಡುವ ಮೂಲಕ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ದೂಳು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದೇ ವೇಳೆ ಕರ್ನಾಟಕ ಯುವ ರಕ್ಷಣಾ ವೇದಿಕೆ ತಾಲೂಕು ಘಟಕದ ಉಪಾಧ್ಯಕ್ಷರಾದ ದೇವಿಪ್ರಸಾದ್, ವೀರೇಶ, ಸುನೀಲ್, ಕಾರ್ಯದರ್ಶಿ ಕೃಷ್ಣ, ಸಹಕಾರ್ಯದರ್ಶಿಗಳಾದ ಮಂಜು, ನಾಗರಾಜ, ರಂಗನಾಥ, ಯೋಗೇಶ, ಶ್ರೀಧರ, ದೇವೇಂದ್ರ, ಲೋಕೇಶ.ಬಿ. ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!