ಸಿರುಗುಪ್ಪ : ತಾಲೂಕಿನ ರಾರಾವಿ ಗ್ರಾಮದಲ್ಲಿರುವ ದೀರ್ಘಕಾಲಿಕ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಅಖಿಲ ಭಾರತ ಯುವಜನ ಪೆಡರೇಶನ್ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್‌ಕುಮಾರ್.ಎಸ್.ದಂಡಪ್ಪನವರ್ ಅವರಿಗೆ ಮನವಿ ಸಲ್ಲಿಸಲಾಯಿತು. ಡಿವೈಎಫ್‌ಐ ತಾಲೂಕಾಧ್ಯಕ್ಷ ವೆಂಕಟೇಶ್ ಮಾತನಾಡಿ ಗ್ರಾಮದಲ್ಲಿ ಹರಿಯುವ ವೇದಾವತಿ ನದಿಗೆ ಸೇತುವೆ ನಿರ್ಮಾಣಕ್ಕೆಂದು ಹಲವಾರು ಬಡಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ಬೇರೆಡೆ ಮನೆ ನಿರ್ಮಿಸುವ ಭರವಸೆಯೊಂದಿಗೆ ಹಕ್ಕು ಪತ್ರಗಳನ್ನು ನೀಡಿದ್ದರೂ ಇದುವರೆಗೂ ಮನೆಗಳಿಗೆ ಜಾಗವನ್ನು ನೀಡಿಲ್ಲವಾದ್ದರಿಂದ ಶೀಘ್ರದಲ್ಲೇ ಮನೆಗಳನ್ನು ನಿರ್ಮಿಸಿಕೊಡಬೇಕು. ಗ್ರಾಮದ ಇನ್ನಿತರ ಸಮಸ್ಯೆಗಳಾದ ಈರಲಕಟ್ಟೆಯ ಹತ್ತಿರದ ಸರ್ಕಾರಿ ಜಾಗದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬೇಕು.
3ನೇ ವಾರ್ಡಿನಲ್ಲಿರುವ ಲೇಟ್ ಹೊನ್ನೂರ್‌ಸಾಬ್ ಮನೆಯಿಂದ ರೆಡ್ಡಿ ಅಂಗಡಿ ಮನೆಯವರೆಗೆ ಚರಂಡಿ ನಿರ್ಮಾಣ ಮಾಡಬೇಕು. ಈರಲಕಟ್ಟೆಯ ಹತ್ತಿರ ನೂತನವಾಗಿ ಶುದ್ದ ಕುಡಿಯವ ನೀರಿನ ಘಟಕವನ್ನು ನಿರ್ಮಿಸುವುದು. ಇನ್ನಿತರ ಅಗತ್ಯ ಪ್ರದೇಶಗಳಲ್ಲಿ ಘಟಕಗಳನ್ನು ಪ್ರಾರಂಭಿಸಬೇಕು.
ಗ್ರಾಮದಲ್ಲಿ ನೂತನವಾಗಿ ತಂಗುದಾಣ ನಿರ್ಮಿಸಬೇಕು.
ಎಲ್ಲಾ ವಾರ್ಡ್ ಗಳಲ್ಲಿ ಸುಸಜ್ಜಿತ ರಸ್ತೆ, ಆಟೋ ಆಟೋ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಸಿ ರಸ್ತೆ, ನಿರ್ಮಿಸಬೇಕು. ಮುರಳಿ ರಂಗಪ್ಪನ ಮನೆಯಿಂದ ಎಲ್ಲಮ್ಮನ ಹಳ್ಳದವರೆಗಿನ ಕಳಪೆ ಕಾಮಗಾರಿಯನ್ನು ಪುನರ್ ನಿರ್ಮಿಸಬೇಕು.
ನರೇಗಾ ಯೋಜನೆ ಅಡಿಯಲ್ಲಿ ಮಂಜುರಾದ ದನದ ಶೆಡ್ಡ್, ಕುರಿಶೆಡ್ಡ್, ಸೂಕ್ತ ಫಲಾನುಭವಿಗಳಿಗೆ ದೊರೆಯುವಂತಾಗಬೇಕೆಂದರು.ಇ.ಓ ಪವನ್‌ಕುಮಾರ್.ಎಸ್.ದಂಡಪ್ಪನವರ್ ಮಾತನಾಡಿ ಸಮಸ್ಯೆಗಳ ಬಗ್ಗೆ ಸಂಬಂದಿಸಿದ ಇನ್ನಿತರ ಇಲಾಖೆಗಳ ಗಮನಕ್ಕೆ ತಂದು ಪರಿಹರಿಸುವ ಭರವಸೆ ನೀಡಿದರು.
ವರದಿ : ಶ್ರೀನಿವಾಸ ನಾಯ್ಕ