Ad imageAd image

ಮರ್ಯಾದಾ ಹತ್ಯೆ ನಿಷೇಧ ಮಾನ್ಯ ಕಾಯ್ದೆ ಜಾರಿಗೆ ಆಗ್ರಹ

Bharath Vaibhav
ಮರ್ಯಾದಾ ಹತ್ಯೆ ನಿಷೇಧ ಮಾನ್ಯ ಕಾಯ್ದೆ ಜಾರಿಗೆ ಆಗ್ರಹ
WhatsApp Group Join Now
Telegram Group Join Now

ದಲಿತ ಸಂಘ ಸಂಸ್ಥೆಗಳ ಮಹಾಮಂಡಳದಿAದ ಗಡುವು

ಹುಬ್ಬಳ್ಳಿ : ತಾಲೂಕಿನ ವೀರಾಪೂರ ಗ್ರಾಮದ ಮರ್ಯಾದೆಗೇಡು ಹತ್ಯೆ ಹಾಗೂ ದಲಿತ ದೌರ್ಜನ್ಯವನ್ನು ಖಂಡಿಸಿ ಇಂತಹ ಪ್ರಕರಣಗಳ ನಿಗ್ರಹಕ್ಕೆ ರಾಜ್ಯ ಸರ್ಕಾರ ಕಠಿಣ ಕಾನೂನು ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ವಿವಿಧ ದಲಿತ ಸಂಘ-ಸAಸ್ಥೆಗಳ ಮಹಾಮಂಡಳ ಆಗ್ರಹಿಸುತ್ತದೆಂದು ಸಮತಾಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆಯಿAದದಲೆ ಹತ್ಯೆಯಾದ ಗರ್ಭಿಣಿ ಯುವತಿಯ ಮಾನ್ಯ ಹೆಸರಿನಲ್ಲೇ ‘ಮರ್ಯಾದಾಗೇಡು ಹತ್ಯೆ ನಿಷೇಧ ಮಾನ್ಯ ಕಾಯ್ದೆ’ ಜಾರಿಗೆ ತರಲು ತೀವ್ರವಾದ ಹೋರಾಟ ರೂಪಿಸಲು ಸಿದ್ಧವಾಗಿ ರಾಜ್ಯ ಸರ್ಕಾರಕ್ಕೆ ಬರುವ ಅಧಿವೇಶನದಲ್ಲಿ ಈ ಕಾಯ್ದೆ ಜಾರಿಗೆ ತರಲು ಗಡುವು ನೀಡುತ್ತೇವೆ. ಈ ಒಂದು ಕಾಯ್ದೆ ಅಮಾನವೀಯ ದುಷ್ಕೃತ್ಯ, ಹತ್ಯೆ, ಹಲ್ಲೆ ದೌರ್ಜನ್ಯಗಳ ಕಡಿವಾಣವಾಗಬಹುದು ಎಂದರು.

ಹತ್ಯೆಯಾದ ಮಾನ್ಯಾ ಪತಿ ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ಕನಿಷ್ಠ ಹತ್ತು ಎಕರೆ ಭೂಮಿ, ಸರ್ಕಾರಿ ಉದ್ಯೋಗ ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಪದವಿ ವ್ಯಾಸಂಗದವರಿಗೆ ಉಚಿತ ಶಿಕ್ಷಣ ನೀಡಿ, ಸರ್ಕಾರಿ ಉದ್ಯೋಗ ಕಲ್ಪಿಸುವಂತೆ ಉಳ್ಳಿಕಾಶಿ ಆಗ್ರಹಿಸಿದರು.

ಇನಾಂವೀರಾಪುರದ ಪ್ರಕರಣದಲ್ಲಿ ಕಳೆದ ಮೇ ೨೦೨೫ರಿಂದ ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಜಿಲ್ಲಾಡಳಿತ-ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳು ಜಾತಿ ತಾರತಮ್ಯ ಹೋಗಲಾಡಿಸಲು ಸಂಪೂರ್ಣ ನಿಷ್ಕಿçÃಯವಾಗಿದ್ದು, ಢಾಂಬಿಕ ಆಡಳಿತದಿಂದ ಈ ಜಾತಿ ಮಹಾಮಾರಿ ತೆಗೆದು ಹಾಕಲು ವಿಫಲವಾದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ವೈಫಲ್ಯದ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಂತರಾಜ ಪೋಳ, ದೇವಣ್ಣ ಇಟಗಿ, ಗುರಪ್ಪ ಚಲವಾದಿ, ಲೋಹಿತ್ ಗಾಮನಗಟ್ಟಿ, ಪ್ರಶಾಂತ ವಾಲಿ ಉಪಸ್ಥಿತರಿದ್ದರು.

ವರದಿ : ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!