ಸಿರುಗುಪ್ಪ : –ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಯಕ ಬಂದುಗಳಿಗೆ ಒಪ್ಪಿಗೆ ಪತ್ರದ ಆದೇಶ ವಾಪಾಸಾತಿ ಹಾಗೂ ಎನ್.ಎಮ್.ಎಮ್.ಎಸ್ ಹಾಜರಾಗಿ ಒಂದೇ ಸಲಕ್ಕೆ ಕಡ್ಡಾಯಗೊಳಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಗೆ ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸುಜಾತ ಅವರ ಮೂಲಕ ಮನವಿ ಸಲ್ಲಿಸಲಾಯಿತು
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ವಿ.ಮಾರುತಿ ಮಾತನಾಡಿ ತಾಲೂಕಿನಲ್ಲಿ ಈಗಾಗಾಲೇ ಬಿರುಬಿಸಿಲಿನಿಂದ ಭೀಕರ ಬರಗಾಲ ಬಂದೊದಗಿದ್ದು,
ಪಂಚಾಯಿತಿಗಳಲ್ಲಿ ಅರ್ಜಿ ನಮೂನೆ-6ರ ಮೂಲಕ ಬೇಡಿಕೆಯ ಅರ್ಜಿ ಸಲ್ಲಿಸಿದಾಗಿನಿಂದ 100ದಿನಗಳ ಕಾಲ ಉದ್ಯೋಗವನ್ನು ನೀಡಬೇಕು.
ಹಲವು ಪಂಚಾಯಿತಿಗಳಲ್ಲಿ ಉದ್ಯೋಗ ನೀಡಲು ನಿರ್ಲಕ್ಷ್ಯ ದೋರಣೆ ತೋರುತ್ತಿರುವುದರಿಂದ ಕೃಷಿ ಅವಲಂಭಿತ ರೈತ ಕುಟುಂಬಗಳು ಗುಳೇ ಹೋಗುತ್ತಿದ್ದಾರೆ. ಪಂಚಾಯಿತಿಗಳಿಗೆ ಮೇಟಿಗಳು ಅಲೆದು ಕೆಲಸ ಕೇಳಿದರೂ ಜಿ.ಪಿ.ಎಸ್ ನೆಪವೊಡ್ಡಿ ಕಾಲಹರಣ ಮಾಡುತ್ತಿದ್ದಾರೆ.
ಕೆಲವು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಅಣತಿಯಂತೆ ಅಭಿವೃದಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಅಂತಹವರ ವಿರುದ್ದ ಕ್ರಮ ಜರುಗಿಸಬೇಕು. ಮೇಟಿಗಳಿಗೆ ಸೂಕ್ತ ಕಿಟ್‌ಗಳನ್ನು ನೀಡಬೇಕು.
ಅರ್ಜಿ ಸಲ್ಲಿಸಿದ ನಂತರ ಉದ್ಯೋಗವನ್ನು ಕಾಲಮಿತಿಯೊಳಗೆ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆಯನ್ನು ನೀಡಬೇಕು.
ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸವನ್ನು ನೀಡಿ ಗ್ರಾಮಗಳ ಅಭಿವೃದ್ದಿಗೆ ನೆರವಾಗಬೇಕು. ದೂರದ ಪ್ರಯಾಣಕ್ಕೆ ಸುರಕ್ಷಿತ ವಾಹನಗಳಲ್ಲಿ ಕರೆದೊಯ್ಯಬೇಕು. ಕೆಲಸದ ಸ್ಥಳದಲ್ಲಿ ಶುದ್ದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಇದೇ ವೇಳೆ ತಾಲೂಕು ಖಜಾಂಚಿ ಬಿ.ರಾಮಣ್ಣ, ಸಮಿತಿ ಸದಸ್ಯರಾದ ಹುಸೇನಪ್ಪ, ಸಣ್ಣ ಹುಲುಗಪ್ಪ, ಶಾಂತಮೂರ್ತಿ, ಮಾಸ್ತಿ ಪ್ರಕಾಶ, ಸಿ.ರವಿಕುಮಾರ, ದಿವಾಕರ, ಬಸಪ್ಪ ಇನ್ನಿತರರಿದ್ದರು.
ವರದಿ.ಶ್ರೀನಿವಾಸ ನಾಯ್ಕ