Ad imageAd image

ಐಗಳಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

Bharath Vaibhav
ಐಗಳಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ
WhatsApp Group Join Now
Telegram Group Join Now

ಐಗಳಿ:  -ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೌದು ಅಥಣಿ ತಾಲೂಕಿನ ಪೂರ್ವ ಭಾಗದಲ್ಲಿ 10 ಸಾವಿರ ಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರು ಐಗಳಿ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಇಲ್ಲದರಿವುದು ಅತ್ಯoತ್ಯ ನೋವಿನ ಸಂಗತಿಯಾಗಿದೆ . ಐಗಳಿಯಿಂದ ದಿನ ನಿತ್ಯ ನೂರಾರು ಶಾಲಾ ವಿಧ್ಯಾರ್ಥಿಗಳು ಕೂಲಿ ಕಾರ್ಮಿಕರು ಅಥಣಿ ಪಟ್ಟಣಕ್ಕೆ ಸಂಚಾರ ಮಾಡುತ್ತಾರೆ.

ಆದರೆ ಐಗಳಿ ಗ್ರಾಮಕ್ಕೆಕಳೆದ 30 ವರ್ಷಗಳಿಂದ ಒಂದೇ ಒಂದು ಬಸ್ ದಿನದಲ್ಲಿ ಎರಡು ಭಾರಿ ಮಾತ್ರ ಸಂಚಾರ ಮಾಡುತ್ತದೆ. ಐಗಳಿ ಗ್ರಾಮದಲ್ಲಿ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರ. ಪೋಲಿಸ್ ಠಾಣೆ, ಡಿ ಸಿ ಸಿ ಬ್ಯಾಂಕ, ನಾಡ ಕಛೇರಿ, ಪೋಸ್ಟ ಆಪೀಸ್ ಎರಡು ಪ್ರೌಡ ಶಾಲೆಗಳು ಪ್ರಾಥಮಿಕ ಶಾಲೆಗಳು ಕೆನರಾ ಭ್ಯಾಂಕ ಗ್ರಾಮ ಪಂಚಾಯತಿ ವಿವಿಧ ಸರ್ಕಾರಿ ಕಛೇರಿಗಳು ಇದ್ದು ದಿನ ನಿತ್ಯ ನೂರಾರು ಸಿಬ್ಬಂದಿಗಳು ಗ್ರಾಮಕ್ಕೆ ಆಗಮಿಸುತ್ತಾರೆ ಇವರಿಗೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಾರ್ವಜನಿಕರ ಕೆಲಸಗಳ ಮೇಲೆ ಹಾಗೂ ಇಲ್ಲಿನ ವಿಧ್ಯಾರ್ಥಿಗಳ ಶಿಕ್ಷಣದ ಮೇಲೆಯೂ ಪರಿಣಾಮ ಬೀರುತ್ತಿದೆ.

ಗ್ರಾಮಕ್ಕೆ ಬರುವ ಪೋಸ್ಟ ಆಫೀಸ್ ಪತ್ರಗಳು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಮೂಲ ಭೂತ ಸೌಕರ್ಯಗಳು ಇದ್ದರೂ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸಾರಿಗೆ ಅಧಿಕಾರಿಗಳು ಹಾಗೂ ಗ್ರಾಮದ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಆದರಿಂದ ಅಥಣಿ ಯಿಂದ ಯಲಹಡಗಿ, ಅಡಹಳ್ಳಿ ಕೋಹಳ್ಳಿ ಮಾರ್ಗದಿಂದ ಐಗಳಿ ಕ್ರಾಸ್ ವರಿಗೆ ಪ್ರತಿ ನಿತ್ಯ ಗಂಟೆಗೆ ಒಂದು ಬಸ್ ಸಂಚಾರ ಮಾಡಬೇಕು .

ಅದರಂತೆ ಈ ಹಿಂದೆ ಜಮಖಂಡಿಯಿಂದ ಐಗಳಿಗೆ ಗ್ರಾಮಕ್ಕೆ ವಸತಿ ಬಸ್ ಸಂಚಾರ ಇತ್ತು ಅದು ಕೂಡಾ ಕಳೆದ ಎರಡು ವರ್ಷಗಳಿಂದ ಕರೋನಾ ಸಂಧರ್ಭದಲ್ಲಿ ಬಂದ ಆಗಿದೆ ಈ ಕುರಿತು ಹಲವಾರು ಬಾರಿ ಜಮಖಂಡಿ ಸಾರಿಗೆ ಆಧಿಕಾರಿಗಳಿ ಮನವಿ ಸಲ್ಲಿಸಿದರು ಪ್ರಯೋಜನೆಯಾಗಿಲ್ಲ. ಪ್ರತಿ ನಿತ್ಯ ಗ್ರಾಮಕ್ಕೆ ಆಗಮಿಸುವ ಅಧಿಕಾರಿಗಳು ಸಿಬ್ಬಂದಿಗಳು ಶಾಲಾ ವಿಧ್ಯಾರ್ಥಿಗಳು ಪಿಂಚಿಣಿ ಪಡೆಯುತ್ತಿರುವ ವಯಸ್ಕರು ಐಗಳಿ ಕ್ರಾಸ್ ದಿಂದ ಐಗಳಿ ಗ್ರಾಮದವರಿಗೆ ಮೂರು ಕೀ.ಮಿ. ಕಾಲನ್ನಡೆಗೆ ಮೂಲಕ ಆಗಮಿಸುತ್ತಾರೆ.

ಈ ಕುರಿತು ಹಲವಾರು ಭಾರಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಹಾಗೂ ಸಾರ್ವಜನಿಕರಿಂದ ಮನವಿ ಸಲ್ಲಿಸಿದರು ಪ್ರಯೋಜನೆಯಾಗಿಲ್ಲ ಇದೆ ಪರಸ್ಥಿತಿ ಮುಂದೆ ವರದರೆ ಸಾರಿಗೆ ಅಧಿಕಾರಿಗಳ ವಿರುಧ್ದ ಹೋರಾಟ ಪ್ರಾರಂಭ ಮಾಡುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ಈ ಕುರಿತು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಗಮನಹರಿಸಿ ಐಗಳಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಪಿಸಲು ಆಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದ್ದಾರೆ.

ವರದಿ:- ಆಕಾಶ ಎಮ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!