ಬೆಳಗಾವಿ:-ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲೆಯ ವತಿಯಿಂದ ಬೆಳಗಾವಿ ತಹಶಿಲ್ದಾರರ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಛೇರಿ ಸಿಬ್ಬಂದಿಯ ,ಆತ್ಮಹತ್ಯೆ ಪ್ರಕರಣಕ್ಕೆ ಕಾರಣಿಕರ್ತರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ
ಆಪ್ತಸಾಹಯಕನನ್ನು ಸೇರಿ ಆಪಾದಿತರನ್ನು ತೀವ್ರತರನಾದ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಿ ,ಸಚಿವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸೂಕ್ತ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಪ್ರತಿಭಟನೆ ಮೂಲಕ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ ಮಾತನಾಡಿ ಬೆಳಗಾವಿ ತಹಶಿಲ್ದಾರ ಕಛೇರಿಯ ಸಿಬ್ಬಂದಿ ರುದ್ರೇಶ ಯಡವನ್ನವರ ಮಂಗಳವಾರ ದಿನಾಂಕ 5.11.2024 ರಂದು
ತಹಶಿಲ್ದಾರರ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೆ ವಾಟ್ಸ್ ಆಫ್ ಮೂಲಕ ಡೆತ್ ನೋಟ್ ಹಾಕಿ ತನ್ನ ಸಾವಿಗೆ
ಸಚಿವರ ಆಪ್ತ ಸೋಮು, ತಹಶಿಲ್ದಾರ ಬಸವರಾಜ ನಾಗರಗಾಳ ಮತ್ತು ಸಹೋದ್ಯೋಗಿ ಅಶೋಕ ಕಬ್ಬಲಗಿ ಕಾರಣವಾಗಿದ್ದಾರೆ.
ತಹಶಿಲ್ದಾರ ಕಛೇರಿಯಲ್ಲಿ ನಡೆದಿರುವ ಕರ್ಮಕಾಂಡದ ವಿರುದ್ಧ ಒಗ್ಗಟ್ಟಾಗಿ ಹೊರಾಡಿ ಎಂದು ಸಂದೇಶ ಕಳಿಸಿ ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.ಈ ವ್ಯವಸ್ಥೆಯಿಂದ ಬೆಸತ್ತು ಆತ್ಮಹತ್ಯೆ ಮಾಡಿಕೊಂಡ ಯುವ ನೌಕರದಾರರನ ಕುಟುಂಬಕ್ಕೆ
ನ್ಯಾಯವದಿಗಿಸಬೇಕಾಗಿರುವದು ನಾಗರಿಕ ಸಮಾಜದ ಕರ್ತವ್ಯ.ಈ ಪ್ರಕರಣದಲ್ಲಿ ಸಚಿವರ ಆಪ್ತ ಇರುವದರಿಂದ ಆತನನ್ನು ಮತ್ತು
ಆಪಾದಿತದ್ವಯರನ್ನು ವಿಶೇಷ ತನಿಖಾ ತಂಡದಿಂದ ತಿವ್ರತರನಾದ ತನಿಖೆ ನಡೆಸಿ ಅದರ ಹಿಂದಿನ ಕರ್ಮಕಾಂಡ ಮತ್ತು ಅದಕ್ಕೆ
ಕಾರಣಿಕರ್ತರಾದವರನ್ನು ಪತ್ತೆ ಮಾಡಬೇಕು ಎಂದು ಹೇಳಿದರು.
ಭಾ.ಜ.ಪಾ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ ಈ ತನಿಖೆ ನಿಷ್ಪಕ್ಷಪಾತವಾಗಿ ನಡೆದು ಸತ್ಯ ಹೊರ ಬರಬೇಕಾದರೆ ಸಚಿವೆ ಲಕ್ಷ್ಮೀ
ಹೆಬ್ಬಾಳಕರ ರಾಜಿನಾಮೆ ಕೊಡಬೇಕು. ಅವರು ಕೊಡದೆ ಹೊದರೆ ತಾವುಗಳು ಸಚಿವ ಸಂಪುಟದಿಂದ ಅವರನ್ನು ವಜಾ
ಮಾಡಬೇಕು ಈಗಾಗಲೆ ರಾಜ್ಯದಲ್ಲಿ ನಿಷ್ಠಾವಂತ ಸರ್ಕಾರಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕಲ್ಪಿಸುತ್ತಿರುವ ರಾಜ್ಯ ,ಕಾಂಗ್ರೆಸ್ ಸರ್ಕಾರ 7ಜನ ಸರ್ಕಾರಿ ಅಧಿಕಾರಿಗಳನ್ನು ಬಲಿ ಪಡೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಅನೇಕ ಸಚಿವರು, ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ ಸರ್ಕಾರಿ ನೌಕರದಾರ ಮೇಲೆ ಒತ್ತಡ ತಂದು ಅವರ ಸಾವಿಗೆ ಕಾರಣವಾಗಿರುವ ಇಂತವರನ್ನು ಹೆಡಮೂರಿ ಕಟ್ಟಬೇಕಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ಅಬಕಾರಿ ಹಗರಣಗಳನ್ನು ನೊಡಿದರೆ ಬ್ರಷ್ಟಾಚಾರದ ಪಾಪರ್ ಸರ್ಕಾರ ಇದಾಗಿದ್ದು ಇದನ್ನು ಕಿತ್ತೊಗೆಯಲು ರಾಜದ ಜನತೆ ಸಂಕಲ್ಪತೊಟ್ಟಿದ್ದಾರೆ.ಬೆಳಗಾವಿಯ ರುದ್ರೆಶ ಯಡವನ್ನವರ ಆತ್ಮಹತ್ಯೆ ಪ್ರಕರಣದ ಸಾಕ್ಷ್ಯಗಳ ನಾಶ ಮಾಡಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನದಲ್ಲಿರುವ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರನ್ನು ಸಂಪುಟದಿಂದ ವಜಾಗೊಳಿಸಲು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅರವಿಂದ ಪಾಟೀಲ್,ರವಿ ಪಾಟೀಲ್ ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಂಕರ್ ಮಾಡಲಗಿ,ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ಮಲ್ಲಿಕಾರ್ಜುನ್ ಮಾದಮ್ಮನವರ, ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ್ ಚೌಗಲೆ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿಧ್ಧನಗೌಡ್ರ,ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಯಲ್ಲೇಶ್ ಕೊಲಕಾರ,ಜಿಲ್ಲಾ ಮಾಧ್ಯಮ ಸಹ ಪ್ರಮುಖ ಬಾಳೇಶ ಚವ್ವನ್ನವರ,ಸಂತೋಷ ದೇಶನೂರ, ಯುವರಾಜ ಜಾಧವ, ಮಹಾಂತೇಶ ಚಿನ್ನಪ್ಪಗೌಡ್ರ,ನಯನಾ ಬಸ್ಮೆ,ದಾದಾಗೌಡ ಬಿರಾದಾರ, ಪ್ರಸಾದ್ ದೇವರಮನಿ, ಧನ್ಯಕುಮಾರ ಪಾಟೀಲ್, ವಿಠ್ಠಲ್ ಸಾಯಣ್ಣವರ, ವೀರಭದ್ರ ಪೂಜಾರಿ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಪ್ರತೀಕ ಚಿಟಗಿ