Ad imageAd image

ವಿವಿಧ ಶಿಕ್ಷಕರ ಸಂಘದ ಒಳ ಜಗಳದಿಂದಾಗಿ ದೈಹಿಕ ಶಿಕ್ಷಕರ ಬೇಡಿಕೆಗಳು ಈಡೇರುತ್ತಿಲ್ಲ ಅಧ್ಯಕ್ಷ ಮಹದೇವ್ ಗೋಕಾರ್ ವಿಶಾದ

Bharath Vaibhav
ವಿವಿಧ ಶಿಕ್ಷಕರ ಸಂಘದ ಒಳ ಜಗಳದಿಂದಾಗಿ ದೈಹಿಕ ಶಿಕ್ಷಕರ ಬೇಡಿಕೆಗಳು ಈಡೇರುತ್ತಿಲ್ಲ ಅಧ್ಯಕ್ಷ ಮಹದೇವ್ ಗೋಕಾರ್ ವಿಶಾದ
WhatsApp Group Join Now
Telegram Group Join Now

ನಿಪ್ಪಾಣಿ : ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಸಂಘಟನೆಗಳು ಹುಟ್ಟಿಕೊಂಡಿದ್ದು ತಮ್ಮ ಬೇಡಿಕೆಗಾಗಿ ತಮ್ಮ ತಮ್ಮಲ್ಲಿಯ ಒಳ ಜಗಳದಿಂದಾಗಿ ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರ ಸಮಸ್ಯೆಗಳು ಇತ್ಯರ್ಥಗೊಳ್ಳುತ್ತಿಲ್ಲ ಹಾಗೂ ಸರಕಾರ ಇದಕ್ಕೆ ಸ್ಪಂದಿಸುತ್ತಿಲ್ಲವೆಂದು ರಾಜ್ಯ ಸರಕಾರಿ ನೌಕರರ ಸಂಘ ನಿಪ್ಪಾಣಿ ತಾಲೂಕ ಅಧ್ಯಕ್ಷ ಮಹಾದೇವ ಗೋಕಾರ್ ವಿಷಾದ ವ್ಯಕ್ತಪಡಿಸಿದರು.

ಅವರು ನಿಪ್ಪಾಣಿ ತಾಲೂಕಿನ ಬೇಡಿಕೆಹಾಳ್ ಗ್ರಾಮದ ರತ್ನಪ್ಪ ಕುಂಬಾರ ಸಭಾಗ್ರಹದಲ್ಲಿ ಸಮಗ್ರ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಬಿ ಎಸ್ ಸಯುಕ್ತ ಪದವಿ ಪೂರ್ವ ಹಾಗೂ ದೈಹಿಕ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಸನ್ಮಾನ ಸಮಾರಂಭ ಹಾಗೂ ಒಂದು ದಿನದ ಕಾರ್ಯಾಗಾರದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತಾತ್ಯಾ ಸಾಹೇಬ್ ಖೋತ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಸ್ವಾಗತ ಗೀತೆ ನಡೆಯಿತು ಇದೇ ಸಂದರ್ಭದಲ್ಲಿ ನಿವೃತ್ತ ಹೊಂದಿದ ಎಸ್ ಜಿ ಖಾನ್ಗೌಡರ್ ಶಾಂತರಾಮ್ ಜೋಗುಳೇಕರ್ ಸುವರ್ಣ ಯಡೂರ್ಕಾರ್ ಣಿ ಶೈಕ್ಷಣಿಕ ವಲಯದ ಅನ್ಯ ವಲಯಗಳಿಗೆ ವರ್ಗಾವಣೆಯಾದ 14 ಶಿಕ್ಷಕರಿಗೆ ಶಾಲ್ ಶ್ರೀ ಫಲ ನೀಡಿ ಸನ್ಮಾನಿಸಲಾಯಿತು.

ತದನಂತರ ಜುನೇಧಿ ಪಟೇಲ್ ಅವರಿಂದ ಒಂದು ದಿನದ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು. ಈ ಸಂದರ್ಭದಲ್ಲಿ ಶಾಂತರಾಮ್ ಜೋಗಲೆಕರ್ ಸುವರ್ಣ ಯಡೂರಕರ ಸುನಿಲ ಪಡಲಾಳೆ ಸೇರಿದಂತೆ ವಲಯದಿಂದ ಬೇರೆ ವಲಯಕ್ಕೆ ವರ್ಗಾವಣೆಯಾದ ದುಂಡೆಪ್ಪಾ ಹಳ್ಳೂರ ಸೇರಿದoತೆ ವಿವಿಧ ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು.

ವರದಿ  : ಮಹಾವೀರ ಚಿಂಚನೆ 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!