Ad imageAd image

ರಾಜ್ಯದಲ್ಲಿ 7,000 ಗಡಿ ದಾಟಿದ ಡೆಂಗ್ಯೂ ಪ್ರಕರಣಗಳು

Bharath Vaibhav
ರಾಜ್ಯದಲ್ಲಿ 7,000 ಗಡಿ ದಾಟಿದ ಡೆಂಗ್ಯೂ ಪ್ರಕರಣಗಳು
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಶನಿವಾರ ಒಂದೇ ದಿನ 175 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,000 ಗಡಿ ದಾಟಿದೆ.

ಒಂದೇ ತಿಂಗಳಲ್ಲಿ ಆರು ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಈ ವರ್ಷ 93012 ಡೆಂಗೆ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 40918 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ.

ಒಟ್ಟು 5,098 ಮಂದಿಗೆ ಡೆಂಗ್ಯೂ ದೃಪಟ್ಟಿದ್ದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1,908 ಮಂದಿ ಸೇರಿ ಒಟ್ಟು 7006 ಮಂದಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿದೆ.

ಶನಿವಾರ ಒಂದೇ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 115, ಮಂಡ್ಯ 26, ಗದಗ 8, ವಿಜಯಪುರ 9, ಉಡುಪಿ 2, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

ಈಡಿಸ್ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಸೋಂಕಿತ ಸೊಳ್ಳೆ ಕಚ್ಚಿದ ನಾಲ್ಕರಿಂದ ಏಳು ದಿನಗಳಲ್ಲಿ ಹಲವಾರು ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ನೀವು ಗಮನಿಸಬಹುದು.

ಡೆಂಗ್ಯೂ ಜ್ವರದ ಲಕ್ಷಣಗಳು

* ತೀವ್ರ ಹಠಾತ್ ಜ್ವರ
* ತೀವ್ರ ತಲೆನೋವು
* ತೀವ್ರ ಕೀಲು ಮತ್ತು ಸ್ನಾಯು ನೋವು
* ರೆಟ್ರೊ-ಆರ್ಬಿಟಲ್ ನೋವು, ಕಣ್ಣುಗಳ ಸಣ್ಣದೊಂದು ಚಲನೆಯಿಂದಲೂ ಇದು ಉಲ್ಬಣಗೊಳ್ಳಬಹುದು
* ವಾಕರಿಕೆ ಮತ್ತು ವಾಂತಿ
* ದಡಾರ: ದದ್ದುಗಳು ಮುಂಡದ ಮೇಲೆ ಪ್ರಾರಂಭವಾಗಬಹುದು ಮತ್ತು ಮೇಲಿನ ಮತ್ತು ಕೆಳಗಿನ ಅಂಗಗಳಿಗೆ ವಿಸ್ತರಿಸಬಹುದು. ದದ್ದುಗಳು ಎದೆಯಿಂದ ಕೈಗಳು, ಕಾಲುಗಳು ಮತ್ತು ಮುಖಕ್ಕೆ ಹರಡಬಹುದು.

ಈ ರೋಗಲಕ್ಷಣಗಳು ಕೆಲವು ದಿನಗಳ ನಂತರ ಕಣ್ಮರೆಯಾಗಬಹುದು. ಈ ರೀತಿಯ ರೋಗಲಕ್ಷಣಗಳು ಆರಂಭಿಕ ಹಂತದಲ್ಲಿ ಮಾತ್ರ ಕಂಡುಬರುತ್ತವೆ. ಆದರೆ ಡೆಂಗ್ಯೂ ತೀವ್ರ ಸ್ವರೂಪಕ್ಕೆ ಮುಂದುವರಿಯಬಹುದು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!