Ad imageAd image

ಡೆಂಗ್ಯೂ ಜ್ವರ, ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಡಾ. ಅಮರ್

Bharath Vaibhav
WhatsApp Group Join Now
Telegram Group Join Now

ಚಾಮರಾಜನಗರ :– ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಆರೋಗ್ಯ ಇಲಾಖೆ ವತಿಯಿಂದ ಡೆಂಗ್ಯೂ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ವರ್ಗದವರಿಂದ ಮನೆ ಮನೆಗೆ ತೆರಳಿ ಲಾವಾ೯ ಸಮೀಕ್ಷೆ ನಡೆಸಿ ಜಾಗೃತಿ ಮೂಡಿಸಿದರು.

ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ “ಡೆಂಗ್ಯೂ ಜ್ವರ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ವನ್ನೂರು ಗ್ರಾಮದ ಪ್ರಾಥಮಿಕ ಕೇಂದ್ರದ ವೈದ್ಯಧಿಕಾರಿ ಡಾ. ಅಮರ್ ಈ ಕಾರ್ಯಕ್ರಮ ಕುರಿತುಮಾತನಾಡಿ ಡೆಂಗಿ ಜ್ವರ ನಿಯಂತ್ರಣ ಸಮುದಾಯದ ಜವಾಬ್ದಾರಿ. ಮನೆಯಲ್ಲಿ ಸಂಗ್ರಹ ಮಾಡುವ ನೀರಿನ ಡ್ರಮ್ ಗಳು ಸಿಮೆಂಟ್ ತೊಟ್ಟಿಗಳು ಬಕೆಟ್ಗಳು ಹಾಗೂ ಮನೆಯ ಸುತ್ತಮುತ್ತ ಇರುವ ಘನತ್ಯಾಜ್ಯ ವಸ್ತುಗಳಾದ ಟೈರುಗಳು ಒಡೆದ ಬಾಟಲಿಗಳು ಎಳನೀರು ಬುರುಡೆಗಳು ಇವುಗಳಲ್ಲಿ ಮಳೆಯ ನೀರು ಸಂಗ್ರಹವಾಗಿ ಇಲ್ಲಿ ಈಡೀಶ್ ಸೊಳ್ಳೆಗಳು ಉತ್ಪತ್ತಿಯಾಗಿ ಈ ಸೊಳ್ಳೆಗಳ ಕಚ್ಚುವಿಕೆಯಿಂದ ಡಿಂಗಿ ಜ್ವರ ಬರುತ್ತದೆ.

ಆದುದರಿಂದ ಮನೆಯ ಒಳಗಡೆ ವಾರದಲ್ಲಿ ಎರಡು ಬಾರಿ ನೀರಿನ  ಸಂಗ್ರಹಣೆಗಳನ್ನು ಖಾಲಿ ಮಾಡಿ ಚೆನ್ನಾಗಿ ತೊಳೆದು ನೀರನ್ನು ಸಂಗ್ರಹ ಮಾಡಿ ಮುಚ್ಚಿಟ್ಟುಕೊಳ್ಳುವುದು. ಹಾಗೂ ಮನೆಯ ಹೊರಗಡೆ ಎಲ್ಲಾ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಮುಂಜಾಗ್ರತೆ ವಹಿಸುವದು ಆದುದರಿಂದ ಪ್ರತಿ ಶುಕ್ರವಾರ ಎಲ್ಲಾ ಗ್ರಾಮಗಳಲ್ಲಿ ಆರೋಗ್ಯ ಸಿಬ್ಬಂದಿಗಳು ಲಾರ್ವ ಸಮೀಕ್ಷೆ ಮಾಡಿ ಸೊಳ್ಳೆಯ ಉತ್ಪತ್ತಿ ತಾಣಗಳನ್ನು ನಾಶ ಮಾಡಿ ಜನರಲ್ಲಿ ಡೆಂಗಿ ಮತ್ತು ಚಿಕನ್ ಗುನ್ಯಾ ಜ್ವರಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಆಗಿರುತ್ತದೆ ಆದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ. ಸೋಮಣ್ಣ ರೋಗಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ, ಸಂಪಿಗಯ್ಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಸಮುದಾಯ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!