ಕರ್ನಾಟಕದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಸೈಲೆಂಟ್ ಆಗಿ ಹೆಚ್ಚಾಗುತ್ತಿದೆ. ಜನರು ಈ ಬಗ್ಗೆ ನಿರ್ಲಕ್ಷ್ಯ ಮಾಡದೆಯೇ, ಹೆಚ್ಚಿನ ನಿಗಾ ವಹಿಸಬೇಕಾದ ಅವಶ್ಯಕತೆ ಇದೆ. ಅದರಲ್ಲಿಯೂ ಡೆಂಗ್ಯೂ ಹರಡುವ ಸೊಳ್ಳೆಗಳು ಕೆಲವು ಸಮಯದಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ ಆ ಸಮಯದಲ್ಲಿ ಹೆಚ್ಚಿನ ನಿಗಾ ವಹಿಸುವುದು ಅವಶ್ಯವಾಗಿದೆ. ಹಾಗಾದರೆ ಈ ಡೆಂಗ್ಯೂ ಹರಡುವ ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆಗಳು ಯಾವ ಟೈಮ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ದೇಶಾದ್ಯಂತ ಕೊರೊನಾ (Corona) ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ಮಧ್ಯೆ, ಕರ್ನಾಟಕದಲ್ಲಿ ಡೆಂಘಿ (Dengue Cases) ಭೀತಿ ಆರಂಭವಾಗಿದ್ದು, ಈಗಾಗಲೇ ಡೆಂಘಿ ಕೇಸುಗಳ ಸಂಖ್ಯೆ 1 ಸಾವಿರದ ಗಡಿ ದಾಟಿರುವುದು ಆತಂಕ ಮೂಡಿಸಿದೆ. ಅದಲ್ಲದೆ ಮಳೆ ಬರುವ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ರೀತಿಯ ಕಾಯಿಲೆಗಳ ಬಗ್ಗೆ ಜನರು ಹೆಚ್ಚಿನ ನಿಗಾ ವಹಿಸುವುದು ಬಹಳ ಮುಖ್ಯವಾಗಿದೆ. ಇದು ಮಕ್ಕಳಿಂದ ಹಿಡಿದು ಯಾರನ್ನೂ ಬಿಡುವುದಿಲ್ಲ ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅದಲ್ಲದೆ ಡೆಂಗ್ಯೂ ಹರಡುವ ಸೊಳ್ಳೆಗಳು ಕೆಲವು ಸಮಯದಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ ಆ ಸಮಯದಲ್ಲಿ ಹೆಚ್ಚಿನ ನಿಗಾ ವಹಿಸುವುದು ಅವಶ್ಯವಾಗಿದೆ. ಹಾಗಾದರೆ ಈ ಡೆಂಗ್ಯೂ ಹರಡುವ ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆಗಳು ಯಾವ ಟೈಮ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ (When Mosquitoes Spread Dengue)? ಯಾವ ಭಾಗದಲ್ಲಿ ಕಚ್ಚುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮಗೆ ತಿಳಿದಿರಬಹುದು, ಈಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯು ಕಚ್ಚುವುದರಿಂದ ಡೆಂಗ್ಯೂ ಜ್ವರ ಹರಡುತ್ತದೆ. ಸಾಮಾನ್ಯವಾಗಿ ಮಲೇರಿಯಾಗೆ ಕಾರಣವಾದ ಸೊಳ್ಳೆಗಿಂತ ಇದು ಭಿನ್ನವಾಗಿರುತ್ತದೆ. ಈ ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆಗಳು ಮಾನವನ ದೇಹದ ರಕ್ತವನ್ನು ಹೀರಿ ಪ್ರೊಟೀನ್ಗಳನ್ನು ಪಡೆದುಕೊಳ್ಳುವ ಮೂಲಕ ಆರೋಗ್ಯಕರ ಮೊಟ್ಟೆಯನ್ನು ಇಡುತ್ತವೆ ಎನ್ನಲಾಗಿದೆ. ಹೀಗಾಗಿ ಹಗಲಿನ ಹೊತ್ತು ಅಗತ್ಯ ರಕ್ಷಣಾ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ. ಅಲ್ಲದೆ ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆಯು ಕೇವಲ ಡೆಂಗ್ಯೂ ಮಾತ್ರವಲ್ಲದೇ ಚಿಕುನ್ ಗುನ್ಯಾ, ಝಿಕಾ ವೈರಸ್ನಂತಹ ಇನ್ನಿತರ ಮಾರಣಾಂತಿಕ ಕಾಯಿಲೆಗಳನ್ನೂ ಕೂಡ ಹರಡುತ್ತದೆ ಎಂಬುದನ್ನು ಮರೆಯಬಾರದು.
ಡೆಂಘಿ ಸೊಳ್ಳೆಗಳು ಯಾವ ಭಾಗದಲ್ಲಿ ಹೆಚ್ಚಾಗಿ ಕಚ್ಚುತ್ತದೆ?
ಈ ಸೊಳ್ಳೆಗಳ ಬಗ್ಗೆ ನಾವು ತಿಳಿದುಕೊಳ್ಳಬಹುದಾದ ಮತ್ತೊಂದು ಅಂಶವೆಂದರೆ ಇವು ತುಂಬಾ ಎತ್ತರಕ್ಕೆ ಹಾರಲಾರವು. ಸಾಮಾನ್ಯವಾಗಿ ಈ ಸೊಳ್ಳೆಗಳು ಮನೆಯಲ್ಲಿರುವ ಮಡಿಕೆ, ಹುಲ್ಲು ಅಥವಾ ಮನೆಯ ಕಿಟಕಿಗಳಿಗೆ, ಬಾಗಿಲುಗಳಿಗೆ ಹಾಕಿರುವ ಪರದೆಗಳ ಹಿಂದೆ ಅಡಗಿ ಕುಳಿತಿರುತ್ತದೆ. ಇವು ಜನರ ಪಾದ, ಕಾಲು ಹಾಗೂ ಮೊಣಕಾಲುಗಳ ಭಾಗದಲ್ಲಿ ಹೆಚ್ಚಾಗಿ ಕಚ್ಚುತ್ತದೆ. ಇವು ಹೆಚ್ಚಿಗೆ ಎತ್ತರಕ್ಕೆ ಹಾರಲಾಗದ ಕಾರಣದಿಂದ ಕಾಲುಗಳ ಕೆಳಗಿನ ಭಾಗಗಳಲ್ಲಿ ಹೆಚ್ಚಾಗಿ ಕಚ್ಚುವ ಅಪಾಯವಿರುತ್ತದೆ. ಅದಲ್ಲದೆ ಈ ಸೊಳ್ಳೆಗಳು ಮೂಳೆಗಳು ಸುಲಭವಾಗಿ ಸಿಗುವ ಜಾಗದಲ್ಲಿಯೇ ಹೆಚ್ಚು ಕಚ್ಚುತ್ತವೆ ಎನ್ನಲಾಗಿದೆ. ಹಾಗಾಗಿ ಈ ಭಾಗದಲ್ಲಿ ದಪ್ಪ ಬಟ್ಟೆಗಳನ್ನು ಹಾಕಿಕೊಳ್ಳಿ. ಮೈ ತುಂಬಾ ಬಟ್ಟೆಯಿರಲಿ. ನಿಮ್ಮ ಮನೆಯಲ್ಲಿರುವ ಮಕ್ಕಳಿಗೂ ಇದನ್ನು ಅರ್ಥ ಮಾಡಿಸಿ. ಸೊಳ್ಳೆ ಬರದಂತೆ ಮನೆಯಲ್ಲಿ ಜಾಗೃತೆ ವಹಿಸಿ.
ಡೆಂಘಿ ಸೊಳ್ಳೆಗಳು ಯಾವ ಸಮಯದಲ್ಲಿ ಕಂಡುಬರುತ್ತದೆ?
ಡೆಂಗ್ಯೂ ಸೊಳ್ಳೆಗಳು ಎಲ್ಲಾ ಸಮಯದಲ್ಲಿಯೂ ಸಕ್ರಿಯವಾಗಿ ಇರುವುದಿಲ್ಲ. ಇವುಗಳು ಸಾಮಾನ್ಯವಾಗಿ ಸೂರ್ಯೋದಯ ಆದ ನಂತರ ಸುಮಾರು ಎರಡು ಗಂಟೆಗಳ ಕಾಲ ಮತ್ತು ಸಂಜೆ ಸಮಯದಲ್ಲಿ ಕೆಲವು ಗಂಟೆಗಳ ಕಾಲ ಸಕ್ರಿಯವಾಗಿ ಇರುತ್ತವೆ. ಒಂದು ವೇಳೆ ರಾತ್ರಿ ಸಮಯದಲ್ಲಿ ಬೆಳಕು ಇದ್ದಲ್ಲಿ ಆಗ ಡೆಂಗ್ಯೂಗೆ ಕಾರಣವಾಗುವ ಈಡಿಸ್ ಈಜಿಪ್ಟಿ ಸೊಳ್ಳೆಯ ಅಪಾಯವಿರುತ್ತದೆ.




