ಚೇಳೂರು:- ತಾಲೂಕಿನ ರಾಶ್ಚೇರುವು ಗ್ರಾಂ ಪ ವ್ಯಾಪ್ತಿಯ ಕುರುಬವಾಂಡ್ಲಪಲ್ಲಿ ಗ್ರಾಮದಲ್ಲಿ ಕೆಲವಡೆ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಸಾಗದೆ ನಿಂತ ಲ್ಲಿಯೇ ನಿಂತು ತ್ಯಾಜ್ಯವೆಲ್ಲ ಕೊಳೆತು ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗೆ, ಮಲೇರಿಯಾ ಹೀಗೆ ನಾನಾ ಕಾಯಿಲೆಗಳಿಗೆ ಗ್ರಾಮಸ್ಥರು ಜನ ಬಳಲುವಂತಾಗಿದೆ.
ಕುರುಬವಾಂಡ್ಲಪಲ್ಲಿ ಗ್ರಾಮದಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.ಚರಂಡಿಗಳಲ್ಲಿ ತ್ಯಾಜ್ಯ ವಸ್ತುಗಳ ಜತೆಯಲ್ಲಿ ಬೇಡವಾದ ಕವರ್‌ಗಳ ರಾಶಿಯೇ ಇದ್ದು ಕೊಳಕು ನೀರನ್ನು ಮುಂದೆ ಸಾಗಲು ಬಿಡುತ್ತಿಲ್ಲ. ಇದರಿಂದ ಈ ಜಾಗದಲ್ಲಿ ಕೆಟ್ಟವಾಸನೆ ಬೀರುತ್ತಿದೆ.
ಪಿಡಿಒ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಹೇಳಿದ್ದೆವು ಆದರೆ ಅವರು ಸ್ವಚ್ಛಗೊಳಿಸಲು ಮನವಿ ಪತ್ರ ಕೊಡಲು ಹೇಳಿದ್ದರು,ಅದರಂತೆ ಪತ್ರ ಕೊಟ್ಟು ಸುಮಾರು ಎರಡುವಾರ ಕಳೆಯುತ್ತಾ ಬಂದರೂ ಸ್ವಚ್ಛತೆಗೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದು,ಇದರಿಂದ ನನ್ನ ಮಗನಿಗೆ ಡೆಂಗ್ಯೂ ಜ್ವರ ಹರಡಿದೆ,ಇದಕ್ಕೆ ನೇರ ಕಾರಣ ಗ್ರಾಮ ಪ ಆದಿಕಾರುಗಳ ನಿರ್ಲಕ್ಷ್ಯವೆ ಕಾರಣ ಶ್ರೀನಿವಾಸ, ಕುರುಬವಾಂಡ್ಲಪಲ್ಲಿ ಗ್ರಾಮಸ್ಥ
ಕಾಲ ಕಾಲಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಜನರು ಆಸ್ಪತ್ರೆಗಳಿಗೆ ಸಾಲ ಮಾಡಿ ಅಲೆಯುವಂತಾಗಿದೆ. ಗ್ರಾಪಂ ಆದಷ್ಟು ಬೇಗ ಎಚ್ಚೆತ್ತುಕೊಂಡು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕಾಲುವೆಯಲ್ಲಿ ನಿಂತಿರುವ ತ್ಯಾಜ್ಯ ನೀರು ಮುಂದೆ ಸಾಗುವಂತೆ ಶೀಘ್ರವಾಗಿ ಕ್ರಮ ವಹಿಸಬೇಕು. ಗ್ರಾಮಸ್ಥರು
ವರದಿ:ಯಾರಬ್. ಎಂ.