ಸಾಮಾಜಿಕ ಜಾಲತಾಣಗಳು, ಆಧುನಿಕ ಸಂವಹನ ವ್ಯವಸ್ಥೆಗಳು ಬಂದ ಬಳಿಕ ಪತ್ರ ಬರೆಯುವುದು ಕಡಿಮೆಯಾಗುತ್ತಿದೆ. ಸರ್ಕಾರಿ ವ್ಯವಹಾರಗಳು ಸಹ ಈಗ ಆನ್‌ಲೈನ್ ಮೂಲಕ ನಡೆಯುತ್ತಿದ್ದು, ಪತ್ರ ಬರೆಯುವುದು ಬಹುತೇಕ ತೆರೆಮರೆಗೆ ಸರಿಯುತ್ತಿದೆ. ಇಂತಹ ಹೊತ್ತಿನಲ್ಲಿ ವಿಶ್ವದ ದೇಶವೊಂದು ಅಂಚೆ ಮೂಲಕ ಪತ್ರ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ಇನ್ನು ಮುಂದೆ ಅಂಚೆ ಇಲಾಖೆಯಲ್ಲಿ ಪತ್ರಗಳ ವಿತರಣೆ ಸೇವೆ ಇಲ್ಲ ಎಂದು ಡೆನ್ಮಾರ್ಕ್ ಘೋಷಣೆ ಮಾಡಿದೆ. ಹೀಗೆ ಘೋಷಣೆ ಮಾಡಿದ ವಿಶ್ವದ ಮೊದಲ ದೇಶ ಡೆನ್ಮಾರ್ಕ್. ಅಂಚೆ ಇಲಾಖೆ ಕಾರ್ಯ ನಿರ್ವಹಣೆ ಮಾಡಲಿದೆ. ಆದರೆ ಪತ್ರ ಸೇವೆ ಇರುವುದಿಲ್ಲ. 400 ವರ್ಷಗಳ ಅಂಚೆ ವ್ಯವಹಾರವನ್ನು ನಿಲ್ಲಿಸುತ್ತಿರುವುದಾಗಿ ಡೆನ್ಮಾರ್ಕ್ ಅಂಚೆ ಇಲಾಖೆ ಹೇಳಿದೆ. 25 ವರ್ಷಗಳ ಅವಧಿಯಲ್ಲಿ ಅಂಚೆ ಮೂಲಕ ಪತ್ರ ವ್ಯವಹಾರ ಶೇ 90ರಷ್ಟು ಇಳಿಕೆಯಾಗಿರುವ ಹಿನ್ನಲೆಯಲ್ಲಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಡೆನಾರ್ಕ್‌ನಲ್ಲಿ ಅಂಚೆ ಸೇವೆಯನ್ನು ಪೋಸ್ಟ್ ನಾರ್ಡ್ ಎಂಬ ಸಂಸ್ಥೆ ನಡೆಸುತ್ತಿತ್ತು. ಈಗ ಅಂಚೆ ಮೂಲಕ ಪತ್ರ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ ಎಂದು ಪೋಸ್ಟ್ ನಾರ್ಡ್ ಹೇಳಿದೆ.
ದೇಶದ ಜನರು ಪತ್ರ ಬರೆಯುವುದನ್ನು ಬಿಟ್ಟುದ್ದು ದೇಶದ 1500 ಅಂಚೆ ಬಾಕ್ಸ್‌ಗಳಿ ಖಾಲಿಯಾಗಿಯೇ ಉಳಿದಿವೆ ಎಂದು ಪೋಸ್ಟ್ ನಾರ್ಡ್ ಹೇಳಿದೆ. ಡಿಜಿಟಲೀಕರಣದ ಪರಿಣಾಮ ಇಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ತಿಳಿಸಿದೆ.




