ಸಿಂಧನೂರು: 77 ನೇ ಗಣರಾಜ್ಯೋತ್ಸವ ದಂದು ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಬಸವ ಸರ್ಕಲ್ ನಲ್ಲಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸೌಹಾರ್ದ ಸಹಕಾರಿ ಶಾಖೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಲಾರದೆ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಖಂಡನೀಯ ವ್ಯಕ್ತಪಡಿಸಿಇದನ್ನು ಪ್ರಶ್ನಿಸಿದಾಗ ಶಾಖೆಯ ವ್ಯವಸ್ಥಾಪಕ ಲಿಂಗನಗೌಡ ನಾವು ಅಂಬೇಡ್ಕರ್ ಫೋಟೋ ಇಡುವುದಿಲ್ಲ ಪತ್ತಿನ ಸೌಹಾರ್ದ ಸಹಕಾರಿ ಶಾಖೆಯಲ್ಲಿ ಯಾರು ಅಂಬೇಡ್ಕರ್ ಅವರ ಭಾವಚಿತ್ರ ಇಡಬಾರದು ಎಂದು ತೀರ್ಮಾನ ಮಾಡಿದ್ದೇವೆ ಎಂದು ಪೊಲೀಸ್ ಇಲಾಖೆ ಮುಂದೆ ಘೋಷಿಸಿದ್ದಾರೆ.

ಇದು ನಿರ್ಲಕ್ಷ್ಯವಲ್ಲ ಇದು ಕಾನೂನು, ಸಂವಿಧಾನ ಮತ್ತು ಗಣರಾಜ್ಯಕ್ಕೆ ಮಾಡಿದ ಬಹಿರಂಗ ಅವಮಾನ. ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರವನ್ನು ನಿರಾಕರಿಸುವುದು ಎಂದರೆ? ಸಂವಿಧಾನವನ್ನು ನಿರಾಕರಿಸಿದಂತೆ, ದಲಿತ ಸಮುದಾಯದ ಅಸ್ತಿತ್ವವನ್ನೇ ತಿರಸ್ಕರಿಸಿದಂತೆ ಗಣರಾಜ್ಯೋತ್ಸವದ ಆತ್ಮವನ್ನೇ ಕೊಂದಂತೆ ಇದು ಸಂವಿಧಾನಕ್ಕೆ ಹಾಕಿದ ಸವಾಲ್ ಇದು ದಲಿತ ಸಮುದಾಯದ ಆತ್ಮ ಗೌರವದ ಪ್ರಶ್ನೆ ನ್ಯಾಯ ಸಿಗದಿದ್ದರೆ ರಾಜ್ಯ ವ್ಯಾಪ್ತಿ ಹೋರಾಟ ಸಹಕಾರ ಪತ್ತಿನ ಶಾಖೆಯ ಆಡಳಿತ ಮಂಡಳಿ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟಗಳು ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುರುರಾಜ ಎಸ್. ಮುಕ್ಕುಂದ. ಹನುಮಂತಪ್ಪ ಹಂಪನಾಳ. ನರಸಪ್ಪ ಕಟ್ಟಿಮನಿ. ಶಿವರಾಜ ಉಪ್ಪಲದೊಡ್ಡಿ. ವೀರೇಶ್ ಹಂಚಿನಾಳ ಕೆ. ಎಂ. ಗಂಗಾಧರ. ಯಮನೂರಪ್ಪ ಪರಾಪುರ. ವೆಂಕಟೇಶ್ ಗಿರಿಜಾಲಿ. ಹನುಮಂತಪ್ಪ ಗೋಮರ್ಸಿ. ಮುದಿಯಪ್ಪ ಹನುಮನಗರ. ಮಾರಪ್ಪ ರಾಮತ್ನಾಳ. ಹೊನ್ನೂರ ಕಟ್ಟಿಮನಿ. ವೀರಣ್ಣ ಸುಲ್ತಾನಾಪುರ
ಹನುಮೇಶ್ ಮೈತ್ರಿ. ಹೆಚ್. ಸುಲಂಗಿ. ಆಲಂಬಾಸ್ ಬೂದಿವಾಳ. ಜಂಬಣ್ಣ ಉಪ್ಪಲದೊಡ್ಡಿ. ಸೇರಿದಂತೆ ಇನ್ನೂ ಅನೇಕರಿದ್ದರು




