ರಾಯಚೂರು: ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಅಕ್ಟೋಬರ್ 22ರಂದು ರಾಯಚೂರಗೆ ಜಿಲ್ಲೆಗೆ ಭೇಟಿ ನೀಡಿ, ರಾಯಚೂರು ಗ್ರಾಮೀಣ ಪ್ರದೇಶದಲ್ಲಿನ ಪಂಚಮುಖಿ ಆಂಜನೇಯ ದೇವರ ದರ್ಶನ ಪಡೆದುಕೊಂಡರು.
ಪೂರ್ವ ನಿಗದಿಯಂತೆ ಬೆಳಗ್ಗೆ, ಆಂಧ್ರಪ್ರದೇಶದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಅಲ್ಲಿಂದ ರಸ್ತೆ ಮಾರ್ಗವಾಗಿ ಹೊರಟು ಬೆಳಗಿನ 10.45ರ ವೇಳೆಗೆ ರಾಯಚೂರು ಗ್ರಾಮೀಣ ಪ್ರದೇಶದ ಪ್ರಸಿದ್ಧ ಅಧ್ಯಾತ್ಮ ಕೇಂದ್ರ ಪಂಚಮುಖಿ ಶ್ರೀ ಆಂಜನೇಯ ದರ್ಶನ ಪಡೆದುಕೊಂಡರು.
ದೇವಸ್ಥಾನದ ಪುರೋಹಿತರಾದ ಶ್ರೀ ಭಾರತಿ ಆಚಾರ್ಯ, ಶ್ರೀ ಶ್ಯಾಮಾಚಾರ್ಯ, ಶ್ರೀ ಅನಂತಾಚಾರ್ಯ ಮತ್ತು ಶ್ರೀ ಗುರುಭೀಮಾಚಾರ್ಯ ಅವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು.
ಡಿ.ಕೆ.ಶಿವಕುಮಾರ ಅವರ ಇಷ್ಟಾರ್ಥ ಸಿದ್ಧಿಗಾಗಿ ಪಂಚಮುಖಿ ಆಂಜನೇಯ ಉತ್ಸವ ಮೂರ್ತಿಗೆ ಇದೆ ವೇಳೆ ಪುಷ್ಪಾರ್ಚನೆ ನೆರವೇರಿತು.
ಈ ಸಂದರ್ಭದಲ್ಲಿ ಸಚಿವರಾದ ಎನ್ ಎಸ್ ಬೋಸರಾಜು, ಸಂಸದರಾದ ಜಿ ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಬಸವನಗೌಡ ತುರವಿಹಾಳ, ಮುಖಂಡರಾದ ಅಸ್ಲಂ ಪಾಶಾ ಸೇರಿದಂತೆ ಇನ್ನೀತರರು ಇದ್ದರು. ದೇವರ ದರ್ಶನ ಬಳಿಕ ಡಿ.ಕೆ.ಶಿವಕುಮಾರ ಅವರು ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಪಂಚಮುಖಿಯ ಆಂಜನೇಯ ದೇವರ ದರ್ಶನ ಪಡೆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ




