ನಿಪ್ಪಾಣಿ: ರಜೆ ದಿನದಂದೂ ಸದಲಗಾ ಉಪ ನೋಂದಣಿ ಕಚೇರಿ ಕಾರ್ಯಾರಂಭ: ಉಪ ನೋಂದಣಿ ಅಧಿಕಾರಿ ರಾಜೇಶ್ ಕದಂ ಮಾಹಿತಿ
ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದಲ್ಲಿ ಈಗಾಗಲೇ 2ನೇ ಶನಿವಾರ ಮತ್ತು 4ನೇ ಶನಿವಾರ, ರವಿವಾರಗಳ ರಜಾ ದಿನದಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪನೋಂದಣಿ ಕಚೇರಿಗಳು ಸರದಿ ಆಧಾರದಂತೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸಿದ್ದು ಅದರಂತೆ ಚಿಕ್ಕೋಡಿ ತಾಲೂಕಿನ ಸದಲಗಾ ಉಪ ನೊಂದಣಿ ಕಚೇರಿಯು ಬರುವ ದಿನಾಂಕ 27ರಂದು ರವಿವಾರ ಕಾರ್ಯ ನಿರ್ವಹಿಸಲಿದ್ದು ಎಂದಿನಂತೆ ಕಚೇರಿಯಲ್ಲಿ ಜಿಲ್ಲೆಯ ಯಾವುದೇ ಸ್ವತ್ತುಗಳು ನೋಂದಣಿ ಮಾಡಿಸಬಹುದು.
ಇದರ ಬದಲಾಗಿ ಮಂಗಳವಾರ ದಿನಾಂಕ್ 27ರಂದು ರಜೆ ಇದೆಯೆಂದು ತಿಳಿಸಿ ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಸದಲಗಾ ಉಪ ನೊಂದಣಿ ಅಧಿಕಾರಿ ರಾಜೇಂದ್ರ ಕದಮ ತಿಳಿಸಿದ್ದಾರೆ. ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಇನ್ನು ಮುಂದೆ ನಿರಂತರ ಸರದಿಯಂತೆ ರಜೆ ದಿನಗಳಂದು ಕರ್ತವ್ಯ ನಿರ್ವಹಿಸುತ್ತಿರುವುದಾಗಿ ರಾಜೇಂದ್ರ ಕದಮ ತಿಳಿಸಿದರು.
ಸುದ್ದಿಗೊಷ್ಟಿಯಲ್ಲಿ ಪ್ರಥಮ ದರ್ಜೆ ಸಹಾಯಕ ಎಚ್ ಐ ನದಾಫ್, ದ್ವಿತೀಯ ದರ್ಜೆ ಸಹಾಯಕ ನಾಗರಾಜ ಹೊಸಮನಿ, ಶಿವಾಜಿ ಹಿರೇಕುಡಿ, ಡಿ ಗ್ರೂಪ್ ಹಾಗೂ ಗಣಕಯಂತ್ರ ನಿರ್ವಾಹಕರಾದ ಮುಬಾರಕ್ ದಪೇದಾರ್, ಮುದತ ಸರ್ ಹೊಂಗಲ್, ಬಸವರಾಜ ನಿಪ್ಪಾಣಿ ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ




