ಬೆಳಗಾವಿ: ನಗರದ ಸರ್ಕಿಟ್ ಹೌಸ್ (ಐಬಿ)ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು
ಪಶ್ಚಿಮಘಟದಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಬಂದರೂ ಸಂತ್ರಸ್ತರ ನೆರವಿಗೆ ಸರಕಾರ ಬಂದಿಲ್ಲ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಹಾರ ಘೋಷಣೆ ಮಾಡಬೇಕೆಂದು ಎಂದು ರಾಜಸಭಾ ಸದಸ್ಯ ಈರಣ್ಣಾ ಕಡಾಡಿ ಒತ್ತಾಯಿಸಿದರು. ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿರುವ ಪರಿಣಾಮವಾಗಿ
ಬೆಳಗಾವಿ ಜಿಲ್ಲೆಯ ಕೃಷ್ಣಾ ಮತು ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಜನ ಜೀವನ ತುಂಬಾ ಅಸ್ವಸ್ಥಗೊಂಡಿದೆ ಎಂದರು.
ಜಿಲ್ಲೆಯಲ್ಲಿ ವಾಡಿಕೆ ಮಳೆಯ ಪ್ರಮಾಣ 354 ಮಿ.ಮಿ ಆಗಬೇಕಿತ್ತು ಆದರೆ ಪ್ರಸ್ತುತ 578 ಮಿ.ಮೀ ಮಳೆಯಾಗಿದೆ.
ಹೆಚ್ಚುವರಿ 63 ಮಿ.ಮೀ ಆಗಿದೆ. ಮಹಾರಾಷ್ಟ್ರದ ರಾಜಾಪೂರ ಮತ್ತು ಕೋಯ್ನಾ ಜಲಾಶಯಗಳು ಭರ್ತಿಯಾಗಿದ್ದು, ಸುಮಾರು 2 ಲಕ್ಷ 87 ಸಾವಿರ ಕ್ಯೂಸೆಕ್‍ಗಿಂತ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತಿದೆ. ಅದೇ ರೀತಿ ಘಟಪ್ರಭಾ ನದಿಗೂ ಕೂಡಾ 50 ಸಾವಿರ ಕ್ಯೂಸೆಕ್‍ಗಿಂತ ಹೆಚ್ಚು ನೀರು ಹರಿದು ಬರುತ್ತಿರುವ ಪರಿಣಾಮವಾಗಿ ಈ ಎರಡು ನದಿಗಳ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದರು.
ಘಟಪ್ರಭಾ ನದಿಗೆ ಕಳೆದ ಜೂ.28 ರಂದು 84 ಸಾವಿರ ಕ್ಯೂಸೆಕ್ ಅತಿ ಹೆಚ್ಚು ನೀರು ಹರಿದು ಬಂದಿದೆ. ಕೃಷ್ಣಾ ನದಿಗೆ 2 ಲಕ್ಷ 97 ಸಾವಿರ ಕ್ಯೂಸೆಕ್ ಅತಿ ಹೆಚ್ಚು ನೀರು ಹರಿದು
ಬಂದಿದೆ ಎಂದರು.
ಈ ಎರಡು ನದಿಗಳ ಪ್ರವಾಹದ ಹಿನ್ನಲೆಯಲ್ಲಿ 232 ಗ್ರಾಮಗಳು ಜಲಾವೃತಗೊಂಡಿವೆ, 47 ಸೇತುವೆಗಳು
ಮುಳುಗಡೆಯಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 45 ಕಾಳಜಿ ಕೇಂದ್ರಗಳಲ್ಲಿ 4764 ಕ್ಕಿಂತ ಹೆಚ್ಚು ಕುಟುಂಬಗಳ 12455 ಕ್ಕಿಂತ ಹೆಚ್ಚು ಸಂತ್ರಸ್ತರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. 5934 ಜನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಅವರಿಗೆ ಸರಕಾರ ನೆರವು ನೀಡಬೇಕಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 6 ಜನರ ಜೀವಹಾನಿಯಾಗಿದ್ದು, 10 ಕ್ಕೂ ಹೆಚ್ಚು ದನ ಕರುಗಳು ಮೃತಪಟ್ಟಿವೆ. 41700 ಹೆಕ್ಟೇರಗಿಂತ ಹೆಚ್ಚು ಕೃಷಿ ಹಾಗೂ 80 ಹೆಕ್ಟೇರಗಿಂತ ಹೆಚ್ಚು ತೋಟಗಾರಿಕೆ ಬೆಳೆಹಾನಿಯಾಗಿದೆ. ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ 2014 ರಿಂದ ಕೇಂದ್ರಸರ್ಕಾರವು ಮುಂಚಿತವಾಗಿ ವಿಪತ್ತು ಎಚ್ಚರಿಕೆ ಮಾಹಿತಿ ನೀಡುವ ವ್ಯವಸ್ಥೆಗೆ 2000 ಕೋಟಿ ರೂಪಾಯಿಗಳನ್ನು ಖರ್ಚು ಮಾಡ ಇತ್ತ.ವಿಶ್ವದ ನಾಲ್ಕು ದೇಶಗಳು ಮಾತ್ರ ಏಳು ದಿನಗಳ ಮುಂಚಿತವಾಗಿ ವಿಪತ್ತು ಎಚ್ಚರಿಕೆಗಳನ್ನು ನೀಡುತ್ತವೆ ಮತ್ತು ಅದರಲ್ಲಿ ಭಾರತವೂ ಒಂದು. ವಿಪತ್ತು ಸಂಭವಿಸುವ ಏಳು ದಿನಗಳ ಮೊದಲು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕಳುಹಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ನಿಗಮದ ಮಾಜಿ ಅಧ್ಯಕ್ಷರಾದ ಮುಕ್ತಾರ್ ಪಠಾಣ್, ಭಾ.ಜ.ಪಾ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್ ಎಸ್ ಸಿದ್ದನಗೌಡರ್, ಭಾ.ಜ.ಪಾ ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಹ ಸಂಚಾಲಕರಾದ ಸುಭಾಷ್ ಸಣ್ಣವೀರಪ್ಪನವರ ಉಪಸ್ಥಿತರಿದ್ದರು.
ವರದಿ: ಪ್ರತೀಕ ಚಿಟಗಿ