Ad imageAd image

ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾದರೂ ಸರಿಯಾಗದ ಸ್ಮಾರ್ಟ್ ಸಿಟಿ

Bharath Vaibhav
ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾದರೂ ಸರಿಯಾಗದ ಸ್ಮಾರ್ಟ್ ಸಿಟಿ
WhatsApp Group Join Now
Telegram Group Join Now

ಹುಬ್ಬಳ್ಳಿ: –ಸ್ಮಾರ್ಟ್ ಸಿಟಿ ಹಣೆಪಟ್ಟಿ ಹೊತ್ತಿರುವ ಹು-ಧಾ ಮಹಾನಗರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಬಂದರು ಸಹ ಅವಳಿನಗರ ಮಾತ್ರ ಸ್ಮಾರ್ಟ್ ಆಗುತ್ತಿಲ್ಲ. ವಿಪರ್ಯಾಸವೆಂದರೆ ತಗ್ಗು-ಗುಂಡಿಗಳ ನಗರವಾಗುತ್ತಿದೆ. ಹೀಗಿರುವಾಗ ಇದೀಗ ಮತ್ತೆ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅನುದಾನ ಬಿಡುಗಡೆಗೆ ಪತ್ರ ಬರೆದಿದ್ದಾರೆ. ಈ ಹಣವಾದರೂ ಅಭಿವೃದ್ಧಿಗೆ ಪೂರಕವಾಗಿ ಖರ್ಚುವಾಗುವುದೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಸಮಾಜ ಸೇವಕ ರಾಜು ನಾಯಕವಾಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನಸಾಮಾನ್ಯರ ತೆರಿಗೆ ಹಣ ಪೋಲಾಗುವುದನ್ನು ನಾವೆಲ್ಲರೂ ಖಂಡಿಸಬೇಕು. ಯಾಕೆಂದರೆ ಈಗಾಗಲೇ ನೂರಾರು ಕೋಟಿ ಹಣ ಹು-ಧಾ ಮಹಾನಗರಕ್ಕೆ ಸ್ಮಾರ್ಟ್ ಸಿಟಿ ಇನ್ನಿತರ ಯೋಜನೆಗಳಿಂದ ಬಂದಿದೆ. ಇದನ್ನು ಸ್ವತಃ ಜನಪ್ರತಿನಿಧಿಗಳೇ ಹೇಳಿಕೊಳ್ಳುತ್ತಾರೆ. ಹೀಗಿರುವಾಗ ನಗರ ಮಾತ್ರ ಯಾಕೆ ನಿರೀಕ್ಷೆ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.

ಇದೀಗ ಪಾಲಿಕೆ ಮೇಯರ್ ಅವರು ಪಾಲಿಕೆಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದು ನಗರದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ನಡೆಯಾಗಿದೆ.‌ ಇದನ್ನು ಸ್ವಾಗತ ಮಾಡುತ್ತೇನೆ. ಆದರೆ ಸರ್ಕಾರ ನೀಡುವ ಅನುದಾನದ ಹಣವನ್ನು ಪಾಲಿಕೆ ಮಾತ್ರ ಯಾಕೆ ಸರಿಯಾಗಿ ವ್ಯಯಿಸಿ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಪ್ರಶ್ನೆ ಕಾಡುತ್ತದೆ.

ಹೀಗಾಗಿ ಈಗಲಾದರೂ ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸರ್ವಸದಸ್ಯರು ಮತ್ತು ಅಧಿಕಾರಿಗಳು ಜನರ ತೆರಿಗೆ ಹಣವನ್ನು ಪೋಲು ಮಾಡದೇ, ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ನಗರವನ್ನು ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ವರದಿ:- ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!