Ad imageAd image

ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ : ಹೆಚ್ಚುತ್ತಿರುವ ಅಪಘಾತಗಳು

Bharath Vaibhav
WhatsApp Group Join Now
Telegram Group Join Now

ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ ವಾಹನ ಸವಾರರಿಗೆ ಅಪಾಯಕಾರಿ

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಬಳಿ ಲಾರಿ ಮತ್ತು ಕಾರುಗಳ ಮದ್ಯೆ ಅಪಘಾತ ಜರುಗಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಹದಗೆಟ್ಟು ಹಲವು ವರ್ಷಗಳಾದರೂ ಅಭಿವೃದ್ದಿಯಾಗದಿರುವುದು ಅಪಘಾತಗಳಿಗೆ ಕಾರಣವೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ರಾಜ್ಯದ ಬೀದರ್ ಜಿಲ್ಲೆಯ ಔರಾದ್‌ನಿಂದ ಶ್ರೀರಂಗಪಟ್ಟಣದವರೆಗೆ ಸಂಪರ್ಕ ಕಲ್ಪಿಸುವ 150ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆಕ್ಕಲಕೋಟೆಯಿಂದ ತಾಲೂಕು ಗಡಿಭಾಗದ ಶ್ರೀ ಗಡ್ಯಾಳ್ ಮಾರೆಮ್ಮ ದೇವಸ್ಥಾನದವರೆಗೆ ಬಿದ್ದಿರುವ ಕಂದಕಗಳು ಪ್ರಯಾಣ ಕರಿಗೆ ಹೆಮ್ಮಾರಿಯಾಗುತ್ತಿವೆ ಎಂದರೆ ತಪ್ಪಾಗಲಾರದು.

ಸಿರುಗುಪ್ಪ ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಉಸ್ತುವಾರಿ ಸಚಿವರು ಈ ಬಗ್ಗೆ ಹೆದ್ದಾರಿಗೆ ಸಂಬಂದಿಸಿದ ಅಧಿಕಾರಿಗಳನ್ನು ವಿಚಾರಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಇಲ್ಲವೇ ರಸ್ತೆ ಅಭಿವೃದ್ದಿಗೊಳಿಸಿ ಆದೇಶ ನೀಡಿದ್ದರು.

ಆದರೆ ಇದುವರೆಗೂ ರಸ್ತೆ ಅಭಿವೃದ್ದಿ ಆಗದಿರುವುದಕ್ಕೆ ಸಚಿವರ ಆದೇಶಕ್ಕೂ ಕಿಮ್ಮತ್ತಿಲ್ಲದಂತಾಗಿದೆ.

ಪ್ರತಿನಿತ್ಯವೂ ಈ ಮಾರ್ಗವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರದಿಂದಲೂ ರಾಜಧಾನಿ ಕೇಂದ್ರದ ಬೆಂಗಳೂರಿಗೆ ಹಲವಾರು ಬಸ್ಸುಗಳು ಸಂಚರಿಸುತ್ತಿವೆ.

ಇನ್ನು ಸ್ವಲ್ಪ ಮಳೆ ಬಂದರೆ ಸಾಕು ಬೃಹದಾಕಾರದ ಗುಂಡಿಗಳಲ್ಲಿ ನೀರು ತುಂಬಿ ದ್ವಿಚಕ್ರ ಹಾಗೂ ಲಘು ವಾಹನಗಳಲ್ಲಿ ಪ್ರಯಾಣ ಸುವ ಪ್ರಯಾಣ ಕರು ತಮ್ಮ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಸಂಚರಿಸುವಂತಾಗಿದೆ.

ಕೆಲವು ವರ್ಷಗಳೇ ಕಳೆದರೂ ಬೇಕಾಬಿಟ್ಟಿಯಾಗಿ ಎಂಬಂತೆ ಆಮೆಗತಿಯಲ್ಲಿ ಕಾಮಗಾರಿ ಸಾಗಿದ್ದು, ಸುರಕ್ಷತಾ ಫಲಕಗಳಿಲ್ಲದಿರುವುದರಿಂದ ರಸ್ತೆಯ ಬದಿ ಮಣ್ಣು ಹಾಕದಿರುವುದರಿಂದ ವಾಹನಗಳ ಆಯತಪ್ಪಿ ಸಾವು ನೋವುಗಳು ಸಂಭವಿಸುತ್ತಿವೆ.

ಇನ್ನು ಮುಂದಾದರೂ ಸಂಬಂದಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನವಹಿಸಿ ರಸ್ತೆ ಅಭಿವೃದ್ದಿಗೊಳಿಸುವಂತೆ ಸಾರ್ವಜನಿಕರಾದ ಖಾದರಭಾಷ, ಬಸವಂತ ಮಾರೆಪ್ಪ ಒತ್ತಾಯಿಸಿದರು.

ವರದಿ: ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!