ಸೇಡಂ:- ತಾಲ್ಲೂಕಿನ ಕುಕ್ಕಂದ ಗ್ರಾಮದ ಓಣಿ ಒಂದರಲ್ಲಿ ಸುಮಾರು ದಿನಗಳಿಂದ ಚರಂಡಿ ನೀರು ರಸ್ತೆಗೆ ತೇಲಿ ಬಂದರು ಕೂಡ ಗಮನ ಹರಿಸದೆ ಪಿಡಿಓ ಮತ್ತು ಸದಸ್ಯರ ನಿರ್ಲಕ್ಷ್ಯ ತೋರಿದ ವ್ಯವಸ್ಥೆ .
ಸುಮಾರು ದಿನಗಳಿಂದ ಜನ ಸಾಮಾನ್ಯರು ಓಡಾಡುವ ರಸ್ತೆಯಲ್ಲಿ ಎಲ್ಲಿ ಅಂದರೆ ಅಲ್ಲಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಬರುತಿದೆ. ಅದನು ಪ್ರಶ್ನಿಸಿ ಸಾರ್ವಜನಿಕರು ಅಧಿಕಾರಿಗಳ ಮತ್ತು ಪಂಚಾಯತ ಸದಸ್ಯರ ಗಮನಕ್ಕೆ ತಂದರು ಕೂಡ ಕ್ಯಾರೆ ಅನ್ನದ ಪ್ರತಿನಿಧಿಗಳು .
ದಿನ ನಿತ್ಯ ಶಾಲೆಗೆ ಹೋಗಲು ಮಕ್ಕಳಿಗೆ ಕಷ್ಟ.ಕುಡಿಯುವ ನೀರು ತರಲು ಹೋಗಲು ಕಷ್ಟ .ಬಚ್ಚಲು ನೀರಿನಲ್ಲೇ ಹೋಗಿ ಬಂದು ತಿರುಗಾಡುವ ವ್ಯವಸ್ಥೆ ಕಂಡು ಬಂದಿದ್ದು ಗ್ರಾಮದಲ್ಲಿ ಜನಗಳ ಸಮಸ್ಯೆ ಕೇಳದ ಸದಸ್ಯರು.ಹುಣ್ಣಿಮೆಗೆ ಒಂದು ಸಲ ಗ್ರಾಮಕ್ಕೆ ಭೇಟಿ ಕೊಡುವ ಅಧಿಕಾರಿ ಬಳಗ ಇವೆಲ್ಲ ದರ ನಡುವೆ ಜನರು ನಡೆಯಲು ಕಷ್ಟ ಪಡುವ ವಾತಾವರಣ ಕುಕ್ಕುಂದ ಗ್ರಾಮದಲ್ಲಿ ಸಂಭವಿಸಿದೆ.
ಇಂತಹ ಸಂದರ್ಭದಲ್ಲಿ ಜರೂರು ಈ ಸಮಸ್ಯೆ ಯನ್ನೂ ಅರಿತು ಕೂಡಲೇ ಅದನ್ನು ಸರಿಪಡಿಸದೆ ಹೋದಲ್ಲಿ ಬರುವ ದಿನಗಳಲ್ಲಿ ಪಂಚಾಯತ್ ಸದಸ್ಯರ ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲು ಅವಕಾಶ ಮಾಡಿ ಕೊಡದೆ ಕ್ರಮ ಕೈಗೊಳ್ಳಬೇಕು.ಇಲ್ಲ ವಾದಲ್ಲಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ ಎಂದು ಡಿಎಂಎಸ್ಎಸ್ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್.