ಚಡಚಣ :-ತಾಲೂಕು ಇದೊಂದು ದೊಡ್ಡ ಪಟ್ಟಣ ದಿನಾಲು ವ್ಯಾಪಾರ ವೈವಾಟು ಮಾಡಲು ಸಾವಿರಾರು ಬರುವ ಜನರು ಈ ತಾಲೂಕಿನಿಂದ ಹೊರಗಡೆ ಹೋಗುವ ಎಲ್ಲಾ ಹಳ್ಳಿಯ ಡಾಂಬರೀಕರಣ ರಸ್ತೆಗಳು ಒಡೆದು ತೆಗ್ಗುದಿನ್ನಿಗಳಾಗಿ ಹದಗಟ್ಟುಹೋಗಿದ್ದಾವೆ ಚಡಚಣ ಮಾರ್ಗದಿಂದ ಹವಿನಾಳ ಹತ್ತಳ್ಳಿ ಉಮಾರಾಣಿ ಹೋಗುವ ರಸ್ತೆಗಳು ಸಂಪೂರ್ಣವಾಗಿ ಒಡೆದು ಹಾಳಾಗಿದೆ .
ಮತ್ತು ಚಡಚಣದಿಂದ ಮಹಾರಾಷ್ಟ್ರ ಗಡಿಭಾಗ ಹೋಗುವ ಉಮದಿ ರಸ್ತೆ ಮೂರು ನಾಲ್ಕು ವರ್ಷವಾದರೂ ಯಾವುದೇ ಸರ್ಕಾರ ಇದ್ದರೂ ಕೂಡ ಈ ರಸ್ತೆ ದುರಸ್ತಿ ಆಗಿರುವದಿಲ್ಲ ಚಡಚಣ ತಾಲೂಕಿಗೆ ಬರುವ ಜನರು ತುಂಬಾ ಗೋಳಾಟವಾಗಿದೆ ರಸ್ತೆ ನೋಡಿ ಬರಲು ವ್ಯಾಪಾರಸ್ಥರಿಗೆ ತುಂಬಾ ಕಷ್ಟಕರವಾಗಿದೆ ಇದೇ ರೀತಿ ಮಹಾರಾಷ್ಟ್ರ ಹೋಗುವ ಗಡಿ ಭಾಗಗಳ ರಸ್ತೆ ಎಲ್ಲವೂ ಹದಿಗಟ್ಟುಹೋಗಿವೆ ಇಲ್ಲಿ ಓಡಾಡುತ್ತಿರುವ ಪ್ರಯಾಣಕರು ಸರ್ಕಾರದ ಬಗ್ಗೆ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ .
ಚಡಚಣ ತಾಲೂಕು ಮಹಾರಾಷ್ಟ್ರದ ಗಡಿಭಾಗ ತಾಲೂಕು ಇಲ್ಲಿ ಯಾವುದೇ ಕಾಮಗಾರಿಗಳು ಸರಿಯಾಗಿ ನಡಿತಿಲ್ಲ ಈ ತಾಲೂಕು ಬಗ್ಗೆ ಯಾವುದೇ ಸರ್ಕಾರ ಬಂದರೂ ಇಲ್ಲಿ ಕೆಲಸ ಮಾತ್ರ ಶೂನ್ಯ ಹೀಗಾದರೆ ಈ ತಾಲೂಕು, ಅಭಿವೃದ್ಧಿ ಆಗುವುದಾದರೂ ಹೇಗೆ ಈ ತಾಲೂಕಿಗೆ ನ್ಯಾಯ ಯಾವಾಗ ಸಿಗುವುದು ಇದು ಸರ್ಕಾರಕ್ಕೆ ಒಂದು ಸವಾಲ ಆಗಿ ಪರಿಗಣಿಸಬೇಕಾಗಿದೆ ಈಗಿರುವ ಕಾಂಗ್ರೆಸ್ ಸರ್ಕಾರ ಈ ಗಡಿ ಭಾಗ ತಾಲೂಕು ಸ್ವಲ್ಪ ಗಮನ ಕೊಟ್ಟು ಎಲ್ಲಾ ಕೆಲಸ ಕಾರ್ಯಗಳು ಪ್ರಾರಂಭ ಮಾಡಬೇಕೆಂದು ಇಲ್ಲಿಯ ಸ್ಥಳೀಯ ಜನರು ಕೇಳುತ್ತಿದ್ದಾರೆ.
ವರದಿ :-ಉಮಾಶಂಕರ ಕ್ಷತ್ರಿ