ಬೇಡಿಕೆಗಳ ಈಡೇರಿಕೆಗೆ ದೇವದಾಸಿ ಮಹಿಳಾ ವಿಮೋಚನಾ ಸಂಘದ ಒತ್ತಾಯ

Bharath Vaibhav
ಬೇಡಿಕೆಗಳ ಈಡೇರಿಕೆಗೆ ದೇವದಾಸಿ ಮಹಿಳಾ ವಿಮೋಚನಾ ಸಂಘದ ಒತ್ತಾಯ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಾಲೂಕು ಘಟಕ ಹಾಗೂ ದೇವದಾಸಿ ಮಹಿಳೆಯರ ಮಕ್ಕಳ ಹಕ್ಕುಗಳ ಹೋರಾಟ ತಾಲೂಕು ಸಮಿತಿಯಿಂದ ದೇವದಾಸಿ ಮಹಿಳೆಯರ ಮರುಗಣತಿ ನಡೆಸುವಂತೆ ಕೋರಿ ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ಕೆ.ಈರಮ್ಮ ಅವರು ಮಾತನಾಡಿ ತಡವಾಗಿಯಾದರೂ ದೇವದಾಸಿ ಮಹಿಳೆಯರ ಕುಟುಂಬದ ಮರುಗಣತಿಗೆ ರಾಜ್ಯ ಸರ್ಕಾರ ಕ್ರಮವಹಿಸಿರುವುದು. ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನಿರಂತರ ಮನವಿ ಒತ್ತಾಯಕ್ಕೆ ಸಂದ ಫಲವಾಗಿದೆ.

ಇದಕ್ಕಾಗಿ ನಮ್ಮ ಸಂಘಟನೆಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ನಮ್ಮ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಮರುಗಣತಿಯನ್ನು ದೇವದಾಸಿ ಮಹಿಳೆಯರ ಮನೆಮನೆಗೆ ತೆರಳಿ ಮಾಡಬೇಕು. ಏಕೆಂದರೆ ತಾಲೂಕು ಮಟ್ಟದಲ್ಲಿಯೋ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೋ ಗಣತಿ ನಡೆದಲ್ಲಿ ಭ್ರಷ್ಟಾಚಾರಕ್ಕೆ ಮತ್ತು ದೇವದಾಸಿ ಮಹಿಳೆಯರಲ್ಲದ ಬೇರೆ ವ್ಯಕ್ತಿಗಳು ಸೇರಲು ಕಾರಣವಾಗುತ್ತದೆ.

ಸ್ಥಳೀಯವಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಅವರ ಮೂಲಕ ಮರುಗಣತಿ ಮಾಡುವುದು ಸೂಕ್ತವೆನಿಸುತ್ತದೆ. ಗಣತಿಯ ನಂತರ ದೇವದಾಸಿ ಮಹಿಳೆಯರ ಕುಟುಂಬಗಳಿಗೆ ನಿವೇಶನಗಳನ್ನು ಮತ್ತು ತಲಾ ಐದು ಎಕರೆ ಜಮೀನು ನೀಡಬೇಕು. ವಿದ್ಯಾವಂತ ಮಕ್ಕಳಿಗೆ ಉದ್ಯೋಗವನ್ನು ನೀಡಬೇಕು. ಕಾರಣ ಅನೇಕರು ಮನೆ ಮತ್ತು ಜಮೀನುಗಳಿಲ್ಲದೇ ಬೀದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ದೇವದಾಸಿ ಮಹಿಳೆಯರ ಮಕ್ಕಳು ಪದವೀಧರರಾಗಿದ್ದರೂ ಕೃಷಿ ಮತ್ತು ಹಮಾಲಿಯಂತಹ ಕಾರ್ಯಗಳಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಸರ್ಕಾರಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನವಹಿಸದಿರುವುದು ಬೇಸರದ ಸಂಗತಿಯಾಗಿದೆಂದರು.ಇದೇ ವೇಳೆ ತಾಲೂಕು ಉಪಾಧ್ಯಕ್ಷೆ ಅಂಬಮ್ಮ, ಪ್ರಧಾನ ಕಾರ್ಯದರ್ಶಿ ಎಮ್.ದುರುಗಮ್ಮ, ಖಜಾಂಚಿ ಮಾಳಾಪುರ ಈರಮ್ಮ,ಇನ್ನಿತರರಿದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!