ರಾಮನಗರ : ಮುಖ್ಯಮಂತ್ರಿಗಿರುವ ಗರ್ವದ ಸೊಕ್ಕು ಮುರಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಗುಡುಗಿದರು.
ಚನ್ನಪಟ್ಟಣದ ಜೆ.ಬ್ಯಾಡರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿ, ಕುಮಾರಸ್ವಾಮಿ ಕೈಗಾರಿಕೆ ಅಭಿವೃದ್ಧಿಗೆ ಜಮೀನಿಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.
ಜಮೀನು ನೀಡಲು ಅಸಾಧ್ಯ ಎಂದು ಸಿದ್ದರಾಮಯ್ಯ ಬಹಳ ಸೊಕ್ಕಿನಿಂದ ಉತ್ತಿಸಿದ್ದಾರೆ. ಅವರು ಗರ್ವದಿಂದ ಈ ಮಾತನ್ನು ಹೇಳಿದ್ದಾರೆ. ಗರ್ವದ ಮಾತನ್ನು ಜನ ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಇರಬೇಕೋ, ಬೇಡವೋ ಎಂಬ ತೀರ್ಪು ನಿಮ್ಮದು ಎಂದರು.
ಇನ್ನು ಚನ್ನಪಟ್ಟಣದ ಕ್ಷೇತ್ರದ ಜನರ ಕಷ್ಟಕ್ಕೆ ಬಾರದ ದೇವೇಗೌಡರು, ಮೊಮ್ಮಗನಿಗೆ ಪಟ್ಟಾಭಿಷೇಕ ಮಾಡಲು ಆಂಬ್ಯುಲೆನ್ಸ್ ನಲ್ಲಿ ಬರಲಿದ್ದಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಗೂ ಟಾಂಗ್ ಕೊಟ್ಟ ಹೆಚ್ಡಿಡಿ, ಆಂಬ್ಯುಲೆನ್ಸ್ನಲ್ಲಿ ಬರುವ ಸಂಕಷ್ಟ ನನಗೆ ಇನ್ನೂ ಬಂದಿಲ್ಲ ಎಂದು ತಿವಿದರು.