ಹುಮನಾಬಾದ : 6 ತಿಂಗಳಿಗೊಮ್ಮೆ ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದರಿಂದ ಪಟ್ಟಣದ ಅಭಿವೃದ್ಧಿ ಕುಂಟಿತವಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಹೇಳಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಿಟಗುಪ್ಪ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾಗಿ ಕೇವಲ 7ತಿಂಗಳು ಕಳೆದಿವೆ.
ಇಷ್ಟು ಕಡಿಮೆ ಸಮಯದಲ್ಲಿ ಅಧ್ಯಕ್ಷರಿಗೆ ಅಧಿಕಾರದ ಅನುಭವವೇ ಆಗಿರುವುದಿಲ್ಲ.ಏನು ಮಾಡಬೇಕು ಎಂಬ ಕಲ್ಪನೇಯೂ ಕೂಡ ಬಂದಿರುವುದಿಲ್ಲ.ಅವರನ್ನು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿ ಮತ್ತೊಬ್ಬರಿಗೆ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರೆ ಪಟ್ಟಣ ಹೇಗೆ ಅಭಿವೃದ್ಧಿಯಾಗುತ್ತದೆ.
ಡೆವಲಪ್ಮೆಂಟ್ ವಿಚಾರ ಮಾಡದೆ ಕೇವಲ ತಮ್ಮ ಕಾರ್ಯಕರ್ತರನ್ನು ಖುಷಿ ಪಡಿಸುವುದಕ್ಕಾಗಿ ಪೋಸ್ಟ್ ನೀಡುತ್ತಿರುವ ಕಾಂಗ್ರೆಸ್ಸಿಗರ ನಡೆ ಖಂಡನೀಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂಗಮೇಶ ಜವಾದಿ,ಪರಮೇಶ ಬಬಡಿ ಇದ್ದರು.
ವರದಿ : ಸಜೀಶ ಲಂಬುನೋರ




