ನಿಪ್ಪಾಣಿ: ಬೋರಗಾವ ಪಟ್ಟಣದ ಅಭಿವೃದ್ಧಿಗಾಗಿ ಇದುವರೆಗೆ 104 ಕೋಟಿ 70 ಲಕ್ಷ ರೂಪಾಯಿಗಳ ಅನುದಾನ. ಅಭಿವೃದ್ಧಿಯೇ ನಮ್ಮ ಧ್ಯೇಯ ಶಾಸಕಿ ಶಶಿಕಲಾ ಜೊಲ್ಲೆ. ಹೌದು ನಿಪ್ಪಾಣಿ ಮತಕ್ಷೇತ್ರದಲ್ಲಿಯ ದ್ವಿತೀಯ ಕ್ರಮಾಂಕದ ಅತಿ ದೊಡ್ಡ ಪಟ್ಟಣ ಬೊರಗಾವದಲ್ಲಿ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಲು ಈಗಾಗಲೇ 104 ಕೋಟಿ 70ಲಕ್ಷ ರೂಪಾಯಿಗಳ ಅನುದಾನ ಪಡೆದು ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದ್ದು ಪಟ್ಟಣದಲ್ಲಿ ಕಟ್ಟಲಾದ ಶಾದಿ ಮಹಲ್ ಜಿಲ್ಲೆಗೆ ಮಾದರಿಯಾಗಿದೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.
ಅವರು ವಾರ್ಡ್ ನಂಬರ್ 1 ಹಾಗೂ11 ಮತ್ತು 12 ರಲ್ಲಿಯ ಸಿಸಿ ರಸ್ತೆ ಒಳಚರಂಡಿ ನಿರ್ಮಾಣಕ್ಕಾಗಿ ಅಲ್ಪಸಂಖ್ಯಾತರ ವಸತಿ ಯೋಜನೆ ಅಡಿ ಮಂಜೂರಾದ 3 ಕೋಟಿ 10 ಲಕ್ಷ ರೂಪಾಯಿಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರಾರಂಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಶಾಸಕಿ ಶಶಿಕಲಾ ಜೊಲ್ಲೆಯವರ ಉಪಸ್ಥಿತಿಯಲ್ಲಿ ಪಟ್ಟಣದ ಪ್ರಮುಖರಿಂದ ಶ್ರೀ ಪಲಾರ್ಪಣೆ ಹಾಗೂ ಕಾಮಗಾರಿಗೆ ಭೂಮಿ ಪೂಜೆ ನಡೆಯಿತು. ನಂತರ ನಡೆದ ಸಮಾರಂಭದ ಪ್ರಾರಂಭದಲ್ಲಿ ವೇದಿಕೆಯಲ್ಲಿಯ ಗಣ್ಯರಿಂದ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಶರದ ಜಂಗಟೆ, ಬಾಬಾಸಾಹೇಬ ಚೌಗುಲೆ ಪಾಂಡುರಂಗ ಖೋತ ಹಾಲ ಶುಗರ ನಿರ್ದೇಶಕ ಯುನಿಸ್ ಮುಲ್ಲಾನಿ ಮಾತನಾಡಿ ಪಟ್ಟಣದ ಅಭಿವೃದ್ಧಿಗಾಗಿ ಜೊಲ್ಲೆ ದಂಪತಿಗಳು ಮಾಡಿದ ಕಾಮಗಾರಿಗಳನ್ನು ತಿಳಿಸಿದರು ಸಮಾರಂಭದಲ್ಲಿ ಹಾಲ ಶುಗರ್ ನಿರ್ದೇಶಕ ರಾಮಗೌಡ ಪಾಟೀಲ ಪಂಚಗಂಗಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಹಾವೀರ ಚೌಗಲೆ ನಿತೇಶ ಖೋತ ಅಣ್ಣಾ ಪಾಟಿಲ ಶೀತಲ ಲಡಗೆ ದಾದಾ ಭಾದುಲೆ ರಾಜು ಭದರಗಡೆ ಉತ್ತಮ ಕದಂ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.
ಮಹಾವೀರ ಚಿಂಚಣೆ: ನಿಪ್ಪಾಣಿ




