ಮುದಗಲ್ಲ :- ಐತಿಹಾಸಿಕ ಪ್ರಸಿದ್ಧವಾದ ಮೊಹರಂ ಆಚರಣೆಗೆ ಪಟ್ಟಣದಲ್ಲಿ ಚಾಲನೆ ಸಿಕ್ಕಿದ್ದು, ಕಿಲ್ಲಾದಲ್ಲಿರುವ ಹಜರತ್ ಹುಸೇನ್ ಆಲಂ ದರ್ಗಾದಲ್ಲಿ ಆಲಂಗಳನ್ನು ಸೋಮವಾರ ಪ್ರತಿಷ್ಠಾಪಿಸಲಾಗಿದೆ ದರ್ಗಾವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ ಬೆಳಗಾವಿ, ವಿಜಯಪುರ,ಮುಧೋಳ, ತೆಲಂಗಾಣ ಸೇರಿ ವಿವಿಧೆಡೆ ಯಿಂದ ಆಗಮಿಸಿದ್ದ ಆಲಂಗಳನ್ನು ಪಟ್ಟಣದ ಹಜರತ್ ಹುಸೇನ್ ಆಲಂ ದರ್ಗಾ ಹಿಂಭಾಗದಲ್ಲಿರುವ ದೇವರ ಬಾವಿಯಲ್ಲಿ ಮಜ್ಜನ ಮಾಡಿಸಲಾಯಿತು.
ಬೆಳಗಾವಿ, ಅಂಧ್ರಪ್ರದೇಶ, ಗೋವಾ, ಬಾಗಲಕೋಟಿಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಸಹ ಆಲಂಗಳನ್ನು ಶುಚಿ ಗೊಳಿಸಿದರು. 10 ದಿನ ವಿಶಿಷ್ಟ ವಾಗಿ ಆಚರಿಸಲಾಗುವ ಮುದಗಲ್ ಮೊಹರಂ ನೋಡಲು ರಾಜ್ಯ,ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಾರೆ ಎಂದು ಹಜರತ್ ಹುಸೇನ್ ಆಶೂರ್ ಖಾನ್ ದಗಾ೯ ಕಮಿಟಿಯ ಅಧ್ಯಕ್ಷ ರಾದ ಎಸ್. ಎ ನಯೀಮ್ ಮಾಹಿತಿ ನೀಡಿದರು ಹಾಗೂ ಜು.17 ರಂದು ಹಜರತ್ ಹಸನ್ ಮತ್ತು ಹಜರತ್ ಹುಸೇನ್ ಅಲಂಗಳ ಸವಾರಿ ಹಾಗೂ ರಾತ್ರಿ ದಫನ್ ಕಾರ್ಯಕ್ರಮ ನಡೆಯಲಿದೆ.
ಕಿಲ್ಲಾದಲ್ಲಿನ ಹಜರತ್ ಅಲಂದರ್ಗಾ ಹಿಂಭಾಗದಲ್ಲಿರುವ ದೇವರ ಬಾವಿ ನೀರನ್ನು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ನಂಬಿಕೆ ಯಂತೆ ಮನೆಯವರಿಗಾಗಿ ಬಾಟಲಿಯಲ್ಲಿ ನೀರನ್ನು ತುಂಬಿಕೊಂಡು ಹೋದರು.ಹಜರತ್ ಅಶೂರ ಖಾನ್ ಕಮಿಟಿಯವರು ದರ್ಗಕ್ಕೆ ಬರುವ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಕೈಗೊಂಡಿದ್ದಾರೆ.
ಮುದಗಲ್ ಮೊಹರಂ ವೀಕ್ಷಣೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ತೊಂದರೆ ಆಗದ ರಿತಿಯಲ್ಲಿ ದರ್ಗಾದಲ್ಲಿ ದರ್ಶನಕ್ಕೆ ಸೂಕ್ತ ವ್ಯವಸ್ಥೆ,ಮೂಲ ಸೌಕರ್ಯ ಕಲ್ಪಿಸಲಾಗಿದೆ.ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಆಡಳಿತ ಅಧಿಕಾರಿಗಳು , ಪುರಸಭೆ,ಸ್ಥಳೀಯ ನಾಗರಿಕರು ಸಹಕಾರ ನೀಡುತ್ತಿದ್ದಾರೆ.ಮತ್ತು ಪೊಲೀಸ್ ಇಲಾಖೆ ಹಾಗೂ ಸ್ಥಳಿಯ ಸಹಕಾರ ನೀಡಿದ್ದಾರೆ ಹಜರತ್ ಅಶೂರ ಖಾನ್ ಕಮಿಟಿಯ ಅಧ್ಯಕ್ಷ ರು ಪತ್ರಿಕೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕಮಿಟಿ ಸವ೯ ಸದಸ್ಯರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ