ಚಾಮರಾಜನಗರ ತಾಲೂಕಿನ ಗೂಳಿಪುರ ಎಂಬ ಊರಲ್ಲಿ ಪ್ರತಿ ವರ್ಷ ನಡೆಯುವ ಮಾರಮ್ಮನ ಹಬ್ಬದಂದು ನಾಯಕ ಸಮುದಾಯದ ಜನರು ಮುಳ್ಳಿನ ಪೊದೆಗಳಿಗೆ ಹಾರಿ ಭಕ್ತಿ ಮೆರೆಯುತ್ತಾರೆ. ಗ್ರಾಮದ ಬಿಸಿಲು ಮಾರಮ್ಮ, ಉರುಕಾತಮ್ಮ,ಕುಣಗಹಳ್ಳಿ ಮಾರಮ್ಮ,ಕುಂಟು ಮಾರಮ್ಮ ಹಾಗೂ ಗ್ರಾಮ ದೇವತೆಗಳ ಜಾತ್ರೆಯಲ್ಲಿ ರಾಶಿ-ರಾಶಿ ಇರುವ ಮುಳ್ಳಿನ ಪೊದೆಗಳಿಗೆ ಭಕ್ತರು ಹಾರಿ ಭಕ್ತಿಯ ಪರಾಕಷ್ಠೆ ಮೆರೆಯುತ್ತಾರೆ.ಬಿಸಿಲು ಮಾರಮ್ಮ ಆವಾಹನೆ ಆಗುವ ತನಕ ಗ್ರಾಮದ ಹಲವರು ದೇವರ ಪ್ರತಿನಿಧಿಗಳು ಓಡಿ ಮುಳ್ಳಿನ ಪೊದೆಗಳಿಗೆ ಹಾರುತ್ತಾರೆ. ಡೊಳ್ಳಿನ ಸದ್ದು- ದೇವರ ನಾಮ ಸ್ಮರಣೆಯ ಜೊತೆಗೂಡಿ ಮುಳ್ಳಿನ ಪೊದೆಗಳಿಗೆ ಹಾರುವ ಮೈನವಿರೇಳಿಸುವ ಸನ್ನಿವೇಶವನ್ನು ಸಾವಿರಾರು ಮಂದಿ ಸೋಮವಾರ ಸಂಜೆ ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಭಕ್ತರಾದ ರಾಮು, ಮಹೇಶ್ ನಾಯಕ, ಸತ್ಯಮೂರ್ತಿ ರವರು ಮಾತನಾಡಿದರು…
ಸುತ್ತಮುತ್ತಲಿನ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಬಿಸಿಲು ಮಾರಮ್ಮನ ಕೃಪೆಗೆ ಪಾತ್ರರಾದರು…
ವರದಿ: ಸ್ವಾಮಿ ಬಳೇಪೇಟೆ




