ಗೋಕಾಕ :-ಕೊಣ್ಣೂರಲ್ಲಿರುವ ಗ್ರಾಮದೇವಿ (ದ್ಯಾಮಮ್ಮ) ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಇದೆ ಪೆಬ್ರುವರಿ20 ರಿಂದ 25ರ ತನಕ ಜಾತ್ರೆಯ ಅಂಗವಾಗಿ ಇವತ್ತು ಮರಡಿಮಠದ ಶ್ರೀಗಳು ಆಶಿರ್ವಾದದೊಂದಿಗೆ ಡಿಸಿಸಿ ಬ್ಯಾಂಕ ನಿರ್ದೇಶಕ ಅಮರನಾಥ ಜಾರಾಕಿಹೋಳಿ ಮತ್ತು ಪಟ್ಣದ ಸರ್ವದರ್ಮದ ಹಿರಿಯರ ಹಾಗೂ ಯುವಕರ ಸಮ್ಮುಖದಲ್ಲಿ ಕಾಯಿ ಪೂಜೆ ನೇರವೆರಿಸಲಾಯಿತು.
ಬೆಳಿಗ್ಗೆ 10 ಗಂಟೆಗೆ ದೇವಿಯ ಅರ್ಚಕರಾದ ಬಡಿಗೇರ ಮನೆತನದವರು ಹೊಮದಲ್ಲಿ ಬಾಗಿಯಾಗಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆಯನ್ನು ಏರ್ಪಡಿಸಿದ್ದರು.

ಮರಡಿಮಠದ ಶ್ರೀಗಳು ಪೂಜೆ ನೇರವೆರಿಸಿದ ನಂತರ ವಾಡಿಕೆಯಂತೆ ರಾಣಿಗ್ಯಾನಿಂದ ದೇವಿಗೆ ಹೊಗಳಿ ಬಳಿಕ ದೇವಿಯ ಮೂರ್ತಿಯ ಮತ್ತು ಕಾಯಿಯನ್ನು ಮೆರವಣಿಗೆಯೊಂದಿಗೆ ಭಕ್ತರು ಸೇರಿ ಶ್ರೀ ಹನುಮಾನ ದೇವಸ್ಥಾನದಲ್ಲಿ ಕಾಯಿಗೆ ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿ ಭಂಡಾರ ಒಡೆದು ಹಾರಿಸುತ್ತ ಒಬ್ಬರಿಗೊಬ್ಬರು ಎರಚುತ್ತ ಹರ್ಷದಿಂದ ಬಂಢಾರದಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಉದ್ದಕ್ಕೂ ದೇವಿಗೆ ಜೈಕಾರ ಕೂಗುತ್ತಾ ಕಾಯಿಯನ್ನು ಶ್ರೀದ್ಯಾಮವ್ವನ ಗರ್ಭಗುಡಿಯಲ್ಲಿ ಇಡಲಾಯಿತು,.
ಇವತ್ತಿನಿಂದ ಕೊಣ್ಣೂರ ಗ್ರಾಮದಲ್ಲಿ 20 ಪ್ರೆಬ್ರುವರಿ ಜಾತ್ರೆ ಪ್ರಾರಂಭ ಆಗುವ ತನಕ ಮಂಗಳವಾರ, ಶುಕ್ರವಾರ ಒಳಗೊಂಡು 5 ವಾರ ಪಟ್ಟಣದಲ್ಲಿ ವಗ್ಗರಣಿ ಹಾಕದೆ ಅಡುಗೆ ಮಾಡುವ ಸಂಪ್ರದಾಯ ಇರುತ್ತದೆ.ಇನ್ನು ಈ ಜಾತ್ರೆಯ ಮುಖ್ಯ ವಿಶೇಷ ಅಂದರೆ ಸುತ್ತಮುತ್ತ ಪ್ರದೇಶದಲ್ಲಿ ಯಾವುದೆ ರೀತಿಯ ಬಲಿ ಕೊಡದೆ ಮಾಂಸಾಹಾರಿ ಇಲ್ಲದ ಜಾತ್ರೆ ಅಂದರೆ ಅದು ಕೊಣ್ಣೂರ ದ್ಯಾಮವ್ವನ ಜಾತ್ರೆ ಎಂದು ಪ್ರಸಿದ್ದ ಪಡೆದಿದೆ.ಒಟ್ಟಾರೆಯಾಗಿ 9 ವರ್ಷಕ್ಕೊಮ್ಮೆ ಜರುಗುವ ಜಾತ್ರೆಯಲ್ಲಿ ಜಾತಿ ದರ್ಮ ಬೇದ ಭಾವ ಇಲ್ಲದೆ ಎಲ್ಲರೂ ಎಲ್ಲದರಲ್ಲೂ ಬಾಗಿಯಾಗಿ ಮುಂದೆ ನಡೆಯುವ ಜಾತ್ರೆಗೆ ಇವತ್ತು ಕಾಯಿ ಪೂಜೆಗೆ ಸೇರಿದ ಭಕ್ತರೆ ಸಾಕ್ಷಿ,,
ಇನ್ನು ಈವತ್ತಿನ ಕಾಯಿ ಪೂಜೆ ಮತ್ತು ಜರುಗುವ ಜಾತ್ರೆ ಬಗ್ಗೆ ಸ್ಥಳಿಯರು ತಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಈರಯ್ಯ ಗಣಾಚಾರಿ, ವಿನೋದ ಕರನಿಂಗ, ಮಾರುತಿ ಪೂಜೇರಿ,ಪ್ರಕಾಶ ಕರನಿಂಗ, ಶೇಖರ ಗುಡಜ, ಸೇರಿದಂತೆ ಇನ್ನೂಳಿದ ಮುಖಂಡರಗಳು ಉಪಸ್ಥಿತರಿದ್ದು ಸರ್ವರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ಇನ್ನು ಯಾವುದೆ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಇಲಾಖೆಯಿಂದ ನಿಗಾ ವಹಿಸಲಾಗಿತ್ತು.
ವರದಿ:- ಮನೋಹರ ಮೇಗೇರಿ




