ವಿಜಯನಗರ: ಜಿಲ್ಲೆ ವರದಿ ಎಂ ಮಂಜುನಾಥ್ ಹರಪನಹಳ್ಳಿ ತಾಲೂಕು, ದುಗ್ಗತ್ತಿ ಗ್ರಾಮದ ಗೌತಮ್ ಸುಮಾರು 14 ವರ್ಷಗಳಿಂದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕೆ ನಿರಂತರ ಪಾದಯಾತ್ರೆ ಮಾಡಿಕೊಂಡು ಬರುತ್ತಿದ್ದೇನೆ. ಮೂರು ವರ್ಷಗಳ ಕೆಳಗೆ ವಸಂತ ಎಂಬುವರ ಜೊತೆ ಮದುವೆ ಆಯಿತು. ನಮ್ಮಿಬ್ಬರ ಒಂದು ಗಂಡು ಮಗು ಹಿಂದಿನ ವರ್ಷ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ದಿನದಂದು ಜನಿಸಿತ್ತು. ಆದರೆ ಮಗು ಅನಾರೋಗ್ಯ ಇರುವ ಕಾರಣ ನಾವು ಯಾವುದೇ ಭರವಸೆ ನೀಡಲಾಗದು ಎಂದು ವೈದ್ಯರು ಕೈಚೆಲ್ಲಿ ಕುಳಿತರು ನಮಗೆ ದಿಕ್ಕುತೊಚದಾಗ ನಾನು ನಂಬಿದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯನ್ನು ಭಕ್ತಯಿಂದಲೇ ಮನದಲ್ಲಿ ನೆನೆದು ಸಂಕಲ್ಪ ಮಾಡಿಕೊಂಡೆ “ನಿನ್ನ ರಥೋತ್ಸವ ದಿನದಂದೇ ‘ಜನಿಸಿದ ಮಗ’ನನ್ನು ನೀನೇ ರಕ್ಷಿಸಬೇಕು” ಎಂದು ಕೋರಿಕೊಂಡಿದ್ದೆ ಈಗ ನನ್ನ ಮಗನಿಗೆ ಒಂದು ವರ್ಷ ತುಂಬಿದೆ ಆರೋಗ್ಯದಿಂದ ಇದ್ದಾನೆ ಅದ್ದರಿಂದ ಅವನನ್ನು ಕರೆದುಕೊಂಡು ದಂಪತಿ ಸಹಿತ ಶ್ರೀ ಸ್ವಾಮಿ ದರ್ಶನಕ್ಕೆ ಮಗುವಿನೊಂದಿಗೆ ಪಾದಯಾತ್ರೆ ಮೂಲಕ ಬಂದಿದ್ದೇವೆ. ಅಜ್ಜನನ್ನು ನಂಬಿದ್ದೇವೆ ನಮ್ಮನ್ನು ಕೈಬಿಟ್ಟಿಲ್ಲ ಕಷ್ಟಗಳನ್ನು ನಿವಾರಿಸುವ ಪವಾಡ ಪುರುಷ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಎಂದು ಮನದಾಳದ ಭಕ್ತಿಯ ಮಾತುಗಳನ್ನು ಹಂಚಿಕೊಂಡರು.ಹಾಗು ಭಕ್ತರು ತಮ್ಮ ತಮ್ಮ ಗ್ರಾಮದಿಂದ ನೆಡೆದುಕೊಂಡು ಪಾದಯಾತ್ರೆ ಮೂಲಕ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಮಹಾರಥೋತ್ಸವಕ್ಕೆ ಬರುವ ಹಲವಾರು ಭಕ್ತರಿಗೆ ಪಾದಗಳ ಉಪಸಮನ ಸೇವೆಯನ್ನು ಕೆಲ ಭಕ್ತರು ಮಾಡಿ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಿ ತಮ್ಮ ದೈವಭಕ್ತಿ ಸಮರ್ಪಿಸಿ ವಿಭಿನ್ನ ರೀತಿಯಲ್ಲಿ ಪಾದಯಾತ್ರೆ ಭಕ್ತರ ಸೇವೆ ಮಾಡಿದರು.




