————————————–ಗುರುವನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ : ಗುರುನಾಥ ರಾಜಗೀರಾ
ಬೀದರ : ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ ಈ ಹಿನ್ನೆಲೆಯಲ್ಲಿ ಗುರುವಾರ ಹಿಂದೂಗಳು ಗುರುವಿಗೆ ಪೂಜೆ ಸಲ್ಲಿಸುತ್ತಾರೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಗುರುನಾಥ ರಾಜಗೀರಾ ಹೇಳಿದರು.

ಬೀದತ ತಾಲ್ಲೂಕಿನ ಗುನ್ನಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ದತ್ತಾತ್ರೇಯ ಮಂದಿರದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಗುರು ಎಂದರೆ ಅಂಧಕಾರ ಅಥವಾ ಅಜ್ಞಾನ ದೂರ ಮಾಡುವವರು ಹೀಗಾಗಿ ದೇಶಾದ್ಯಂತ ಗುರು ಪೂರ್ಣಿಮೆಯನ್ನ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾರೆ ಎಂದರು.
ಶ್ರೀ ಸದ್ಗುರು ಶಂಕರದತ್ತ ಮಹಾರಾಜರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರು ಪುರ್ಣಿಮೆಯನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಿದರು.
ಗಂಗಾಧರ ಪಾಟೀಲ, ನಾಗೇಶ ಮಡಿವಾಳ, ಸಂಗಮೇಶ ಬೆಲ್ದಾರ, ವಿಜಯ ದುಬುಲಗುಂಡಿ, ಮಹೇಶಕುಮಾರ, ಶರಣು ವಡಗಾಂವ ಹಾಗೂ ಶ್ರೀ ವಿನಾಯಕ ನಗರ ಭಜನಾ ಮಂಡಳಿಯ ವತಿಯಿಂದ ದಿನವಿಡಿ ಭಜನಾ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ ಗೋರಖನಾಥ ಕುಂಬಾರ, ಶ್ರೀನಿವಾಸ ಬಾಬು, ಮಹೇಶಕುಮಾರ, ದಿಗಂಬರ ಕುಂಬಾರ, ಶಾಂತಾಬಾಯಿ, ಶೈಲಜಾ, ರಾಧಿಕಾ, ಅಂಜಮ್ಮಾ, ವೈಜಿನಾಥ ಕುಂಬಾರ, ರಘುರೆಡ್ಡಿ, ಹಣಮಂತ ವಡ್ಡಿ, ಆನಂದ ಶೀಲವಂತ ಸೇರಿದಂತೆ ಇತರರಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ್




