ಭಾಲ್ಕಿ : ತಾಲ್ಲೂಕಿನ ಧನ್ನೂರ(ಎಚ್) ಗ್ರಾಮದ ಬಾಲಯೋಗಿನಿ ಸುವರ್ಣಾ ಮಾತೆ ತಪೋ ಮಂದಿರದಲ್ಲಿ ಬುಧವಾರ ಗುರು ವಂದನೆ ಕಾರ್ಯಕ್ರಮ ನಡೆಯಿತು.
ಭಕ್ತರು ಸುವರ್ಣಾ ಮಾತೆ ಅವರ ಪಾದ ಪೂಜೆ ಮಾಡಿ, ಶಾಲು ಹೊದಿಸಿ ಗೌರವಿಸಿದರು.
ಭಕ್ತರು ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಪೋ ಮಂದಿರದ ಸುವರ್ಣಾ ಮಾತೆ ಹೇಳಿದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿದರು. ಬೇಲೂರಿನ ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಬೇನ್ ಚಿಂಚೋಳಿಯ ಶಿವಯೋಗಿ ಸ್ವಾಮೀಜಿ, ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಪ್ರಮುಖರಾದ ತುಕಾರಾಮ ಬೆಲ್ದಾರ್, ಇದ್ರಕಾಂತ ದೊಡ್ಡಿ ಡಾಕುಳಗಿ, ಮನೋಹರ ಮಾಳಗೆ, ಮಾರುತಿ ಸಿಂಧೆ ಬಾಬಳಿ, ಸಂಜುಕುಮಾರ ಮಿತ್ರ, ದೇವರಾಜ ದೊಡ್ಡಿ, ಜಗದೇವಿ ಚಿದ್ರಿ, ಜಗನ್ನಾಥ ಗಣಪತಿ, ಗಂಗಾಧರ ಸಚಿನ್ ಧನ್ನೂರ, ತುಕಾರಾಮ ಬೇನ್ಚಿಂಚೋಳಿ, ಜೈಪ್ರಕಾಶ್, ಕರ್ಮವೀರ ಧನ್ನೂರ ಪಾಲ್ಗೊಂಡಿದ್ದರು.
ವರದಿ:ಸಂತೋಷ ಬಿಜಿ ಪಾಟೀಲ್




