ನಿಪ್ಪಾಣಿ : ಕೋಗನೋಳಿ ಗ್ರಾಮದ ಇಬ್ಬರೂ ನಿರ್ಗತಿಕ ಫಲಾನುಭವಿಗಳಿಗೆ ಆಸರೆಯಾದ ಧರ್ಮಸ್ಥಳ ಸಂಸ್ಥೆ.
ನಿಪ್ಪಾಣಿ ತಾಲೂಕಿನ ಕೋಗೋನೊಳ್ಳಿ ಗ್ರಾಮದ ಮಲ್ಲವ್ವ ಡೋಬಳೆ ಮತ್ತು ಮಂಗಲ್ ಪರಿಟ್ ಇವರು ನಿರ್ಗತಿಕರಿದ್ದು ವಯಸ್ಸಾದ ಇಬ್ಬರು ವೃದ್ಧರು ಒಂಟಿ ಜೀವನವನ್ನು ನಡೆಸುತ್ತಿದ್ದಾರೆ.
ವಯಸ್ಸಾಗಿದ್ದರಿಂದ ದುಡಿದು ತಿನ್ನಲು ಅಶಕ್ತರಿರುವ ಕಾರಣ ದಿನನಿತ್ಯದ ಹೊಟ್ಟೆಪಾಡು ಮತ್ತು ಆಸ್ಪತ್ರೆ ಖರ್ಚನ್ನು ನಿಭಾಯಿಸಲು ತುಂಬಾ ಕಷ್ಟಪಡುತ್ತಿದ್ದು ಇದನ್ನ ಮನಗಂಡ ಧರ್ಮಸ್ಥಳ ಸಂಸ್ಥೆಯು ಇಬ್ಬರೂ ವೃದ್ದೆಯರಿಗೆ ಮಾಸಿಕ 1000 ರೂಪಾಯಿ ನಿರ್ಗತಿಕ ಮಾಶಾಸನವನ್ನು ಮಂಜೂರು ಮಾಡಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಸುಮಾರು 13,000 ಕ್ಕಿಂತ ಹೆಚ್ಚು ನಿರ್ಗತಿಕ ಕುಟುಂಬಗಳನ್ನು ಆಯ್ಕೆ ಮಾಡಿ ಅವರಿಗೆ ಕನಿಷ್ಠ ಒಂದು ಸಾವಿರದಿಂದ ಮೂರು ಸಾವಿರದವರೆಗೆ ನಿರ್ಗತಿಕ ಮಾಶಾಸನ ಒದಗಿಸಲಾಗುತ್ತಿದೆ ಇದರಿಂದ ಅನೇಕ ನಿರ್ಗತಿಕ ಫಲಾನುಭವಿಗಳು ತಮ್ಮ ದಿನನಿತ್ಯದ ಊಟಕ್ಕೆ ದವಸ ಧಾನ್ಯಗಳು ಮತ್ತು ಆಸ್ಪತ್ರೆ ಖರ್ಚಿಗಾಗಿ ಬಳಕೆ ಮಾಡುತ್ತಿದ್ದಾರೆ.
ಈ ಇಬ್ಬರೂ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀ ಸಚಿನ ಪರಿಟ್ ಶ್ರೀ ಪ್ರೀತಮ್ ಶಿಂತ್ರೆ ಶ್ರೀ ಪ್ರವೀಣ್ ಭೋಸಲೆ ಹಾಗೂ ನ್ಯಾಯವಾದಿಗಳಾದ ಪ್ರಕಾಶ್ ನವಾಳೆ ಮತ್ತು ರಾಹುಲ್ ಮೇಸ್ತ್ರಿ ಇವರ ಸಮ್ಮುಖದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಮಂಜುನಾಥ ಎಚ್ ಫಲಾನುಭವಿಗಳಿಗೆ ಆದೇಶ ಪ್ರತಿ ಕಾರ್ಡನ್ನು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಅನಿಲ್ ದಾವಣೆ ಜ್ಞಾನವಿಕಾಸ ಸಮನ್ವಯಾಧಿಕಾರಿ ಪಾರ್ವತಿ ಒಕ್ಕೂಟದ ಪದಾಧಿಕಾರಿಗಳು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ




