Ad imageAd image

ಧರ್ಮ ನಗರಿ ಅಕಲೂಜನಲ್ಲಿ ಗಣನಿ ಆರ್ಯಿಕಾ ಪ್ರಜ್ಞಮತಿ ಮಾತಾಜಿಯವರ ಚತುರ್ಮಾಸ

Bharath Vaibhav
ಧರ್ಮ ನಗರಿ ಅಕಲೂಜನಲ್ಲಿ ಗಣನಿ ಆರ್ಯಿಕಾ ಪ್ರಜ್ಞಮತಿ ಮಾತಾಜಿಯವರ ಚತುರ್ಮಾಸ
WhatsApp Group Join Now
Telegram Group Join Now

ನಿಪ್ಪಾಣಿ:  ಪಾದಯಾತ್ರೆಯ ಮೂಲಕ ಪ್ರಯಾಣ. ಸಾವಿರಾರು ಜಿನ ಭಕ್ತರು, ಉದ್ಯಮಿಗಳು ಧರ್ಮಾನುರಾಗಿಗಳು, ನೆಲೆಸಿರುವ ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಅಕಲೂಜ ಪಟ್ಟಣದಲ್ಲಿ ಚತುರ್ಮಾಸ ವ್ರತಾಚರಣೆಗೆ ಚಿಕ್ಕೋಡಿ ತಾಲೂಕಿನ ನೇಜ ವೃತ್ತದಲ್ಲಿರುವ ವಿದ್ಯಾನಂದ ಜ್ಞಾನ ಕೇಂದ್ರದಿಂದ ಪ.ಪೂ.ಗನನಿ ಅರ್ಯಿಕಾ ಪ್ರಜ್ಞಾಮತಿ ಮಾತಾಜಿ
ಪಾದಯಾತ್ರೆಯ ಮೂಲಕ ಪ್ರಯಾಣ ಬೆಳೆಸಿದರು.

ಶಮನೇವಾಡಿ ಬೇಡಕಿಹಾಳ ಗ್ರಾಮದ ಸಮಸ್ತ ಶ್ರಾವಕ ಶ್ರಾವಕಿಯರ ಉಪಸ್ಥಿತಿಯಲ್ಲಿ ಪ್ರಯಾಣ ಬೆಳೆಸಿದ ಅವರು ಶಾಂತಿನಗರ ಸರ್ಕಲ್ ನಲ್ಲಿ ಆಗಮಿಸಿದಾಗ ಅವರನ್ನು ಆದರಪೂರ್ವಕ ಸ್ವಾಗತಿಸಿ ಮುಂಬರುವ ಚತುರ್ಮಾಸಚರಣೆಗೆ ಬೀಳ್ಕೊಡಲಾಯಿತು. . ಈ ಸಂದರ್ಭದಲ್ಲಿ ಪ್ರಜ್ಞಾವತಿ ಮಾತಾಜಿ ಮಾತನಾಡಿ *ಧರ್ಮ ನಗರಿ ಅಕಲೂಜ ಪಟ್ಟಣದಲ್ಲಿಯ ಬಾಹುಬಲಿ ಮಂದಿರದಲ್ಲಿ ಜುಲೈ 3ರಂದು ಚಾತುರ್ಮಾಸ ವೃತಾಚರಣೆ ಕೈಗೊಳ್ಳಲಿದ್ದು ಗುರುಪೂರ್ಣಿಮೆಯ ದಿನ ಅಂದರೆ ಜುಲೈ 10ರಂದು ಚಾತುರ್ಮಾಸ ಕಲೆಶ ಸ್ಥಾಪನೆಯೊಂದಿಗೆ ಪ್ರಾರಂಭವಾಗಲಿದೆ.

ಈ ಮೊದಲು ಅಕಲೂಜ್ ನಲ್ಲಿ ನಿರಂತರ 1983-84ಹಾಗೂ 1985ರಲ್ಲಿ ಮೂರು ವರ್ಷಗಳ ಕಾಲ ಚಾತುರ್ಮಾಸ ವ್ರತಾಚರಣೆ ಮಾಡಿದ್ದು ಇಲ್ಲಿಯ ಜನತೆಯ ಸಹಕಾರ್ಯ ದೊರೆತಿದೆ. ಪಟ್ಟಣದಲ್ಲಿ ಬಾಹುಬಲಿ ಮಂದಿರ ಮಹಾವೀರ್ ಮಂದಿರ ಹಾಗೂ ಮುನೇಶ್ವರ ಮಂದಿರಗಳಿದ್ದು ಇದರ ಜೊತೆಗೆ ಕುಂತಲಗಿರಿ ಕ್ಷೇತ್ರ ಸಿದ್ಧಕ್ಷೇತ್ರ ದಹಿಗಾವ ಅತಿಶಯ ಕ್ಷೇ ತ್ರ ವಿದ್ದು ಸಂಪೂರ್ಣ ಪರಿಸರ ಪವಿತ್ರವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಸೋಮವಾರ ಅಕಲೂಜನಡೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಅಕಲೂಜ್ ಬಾಹುಬಲಿ ಮಂದಿರ ಕಮಿಟಿ ಅಧ್ಯಕ್ಷ ವಿನೋದ ಜೋಷಿ, ಮಹಾವೀರ ಮಂದಿರ ಕಮಿಟಿ ಹಾಗೂ ಮುನೀಶ್ವರ ಮಂದಿರ ಕಮಿಟಿ ಪದಾಧಿಕಾರಿಗಳು ಸಮಸ್ತ ಶ್ರಾವಕ ಶ್ರಾವಕೀಯರು ಉಪಸ್ಥಿತರಿದ್ದರು.

ಮಹಾವೀರ ಚಿಂಚನೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!