ಬೆಂಗಳೂರು:ನಗರದ ದೇವರ ಬೀಸನಹಳ್ಳಿಯಲ್ಲಿ ಬೆಳಗಿನ ಜಾವ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಚಪ್ಪಲಿ ಕಾಲಲ್ಲಿ ದೇವಾಲಯದ ಒಳಗೆ ನುಗ್ಗಿದ ಯುವಕನೊಬ್ಬ, ದೇವರ ವಿಗ್ರಹ ಎಳೆದಾಡಿ, ಅಶ್ಲೀಲ ವರ್ತನೆ ತೋರಿದ ಪ್ರಕರಣ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.
ಬೆಳಗ್ಗೆ ಸುಮಾರು 8.30 ಗಂಟೆಗೆ, ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಕಬೀರ್ ಎನ್ನುವ ವ್ಯಕ್ತಿ ಎಂದು ಗುರುತಿಸಲಾಗಿದೆ.




