ಸಿರುಗುಪ್ಪ : ಶ್ರೀ ಕ್ಷೇತ್ರ ಧರ್ಮಸ್ಥಳದ ಹುನ್ನಾರ ನಡೆಸಿದ ಕಿಡಿಗೇಡಿಗಳನ್ನು ಮತ್ತು ಮತಾಂಧರನ್ನು ತಕ್ಷಣ ಬಂದಿಸಬೇಕು ಹಾಗೂ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಬಿಜೆಪಿ ಪಕ್ಷ ತಾಲೂಕು ಮಂಡಲ ವತಿಯಿಂದ ಸಿರಸ್ತೆದಾರ ಸಿದ್ದಾರ್ಥ್ ಕಾರಂಜಿ ಅವರ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಪಕ್ಷದ ತಾಲೂಕಾಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಧರ್ಮಸ್ಥಳವೆಂಬ ಪವಿತ್ರ ಹೆಸರನ್ನು ಅಪವಿತ್ರಗೊಳಿಸಲು ದೊಡ್ಡ ಹುನ್ನಾರವೇ ನಡೆದಿದ್ದು, ಈ ಹುನ್ನಾರದ ಹಿಂದಿರುವ ಕಿಡಿಗೇಡಿಗಳನ್ನು ಆದಷ್ಟು ಶೀಘ್ರ ಗುರುತಿಸಿ ಧರ್ಮಾಂಧರನ್ನು ಬಂದಿಸಬೇಕು.

ಎಸ್.ಐ.ಟಿ ಮೂಲಕ ಸಹಕಾರ ನೀಡುತ್ತಾ ಸರ್ಕಾರವು ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರವು ಶ್ರೀ ಮಂಜುನಾಥ ಸ್ವಾಮಿಯ ಅವಕೃಪೆಗೆ ಕಾರಣವಾಗಬೇಕಾಗುತ್ತದೆ.
ಆದ್ದರಿಂದ ಆರ್.ಟಿ.ಐ ಕಾರ್ಯಕರ್ತರೆಂದು ಈ ತನಿಖೆಯನ್ನು ನಾವೇ ಮಾಡಿಸುತ್ತಿದ್ದೇವೆಂದು ಟಿ.ವಿ ಮಾದ್ಯಮಗಳಲ್ಲಿ ಹೇಳಿಕೊಂಡು ಇಂತಹ ಪ್ರಕರಣಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾಗಿರುವ ಎಲ್ಲರ ಮೇಲೂ ಕ್ರಮವಾಗಬೇಕೆಂದು ಆಗ್ರಹಿಸಿದರು.
ಅಲ್ಲದೇ ನಗರದಲ್ಲಿನ ಹೆದ್ದಾರಿ ತೀವ್ರವಾಗಿ ಹದಗೆಟ್ಟಿದ್ದು ಕೂಡಲೇ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ನಿವೃತ್ತ ಪ್ರಾಂಶುಪಾಲರಾದ ಬಿ.ಬಸವರಾಜ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಎಂಬುಂದು ಹಿಂದುಗಳಿಗೆ ಒಂದು ಪವಿತ್ರ ಕ್ಷೇತ್ರವಾಗಿದೆ.
ಅಲ್ಲಿನ ಧರ್ಮದರ್ಶಿಯಾಗಿರುವ ಡಾ.ವೀರೇಂದ್ರ ಹೆಗಡೆಯವರು ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಅನೇಕ ಅಭಿವೃದ್ದಿ ಕಾರ್ಯಗಳನ್ನು ರಾಜ್ಯದ್ಯಾಂತ ನಡೆಸುತ್ತಿದ್ದಾರೆ. ಅದನ್ನು ಸಹಿಸದೇ ಕೆಲವು ಅಪವಿತ್ರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಎಮ್.ಎಸ್.ಸಿದ್ದಪ್ಪ, ಪಕ್ಷದ ಕಾರ್ಯದರ್ಶಿಗಳಾದ ಪಕ್ಕೀರಪ್ಪ, ಬಸವರಾಜ, ತಾಲೂಕು ಪಂಚಾಯಿತಿ ಸದಸ್ಯ ಶರಣಬಸವ, ಮಹಿಳಾ ಮೋರ್ಚಾದ ಅಧ್ಯಕ್ಷೆ ಸೀತಾ ರಾಮರಾಜ್, ಎಸ್.ಟಿ.ಮೋರ್ಚಾದ ಅಧ್ಯಕ್ಷ ಬಿ.ಶಿವಪ್ಪ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಮಾರೇಶ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಶೇಕ್ಷಾವಲಿ, ನಗರಸಭೆ ಸದಸ್ಯರಾದ ನಟರಾಜ್, ವಿಕ್ರಮ್‌ಜೈನ್, ಮೇಕೇಲಿ ವೀರೇಶ, ರಾಮಕೃಷ್ಣ, ಮುರುಳಿ ಮೋಹನ್‌ರೆಡ್ಡಿ, ಮುಖಂಡರಾದ ನಾಗೇಶಪ್ಪ, ವೀರನಗೌಡ, ಮಹಾದೇವ, ಮಲ್ಲಯ ಇನ್ನಿತರರಿದ್ದರು.
ವರದಿ: ಶ್ರೀನಿವಾಸ ನಾಯ್ಕ




