Ad imageAd image

ಧರ್ಮಸ್ಥಳ ಅಸಹಜ ಸಾವು ಕೇಸ್ ಸ್ಥಳ ಅಗೆಯುವ ಪ್ರಕ್ರಿಯೆ ಆರಂಭ

Bharath Vaibhav
ಧರ್ಮಸ್ಥಳ ಅಸಹಜ ಸಾವು ಕೇಸ್ ಸ್ಥಳ ಅಗೆಯುವ ಪ್ರಕ್ರಿಯೆ ಆರಂಭ
WhatsApp Group Join Now
Telegram Group Join Now

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಶವಗಳನ್ನು ಹೂತು ಹಾಕಿರುವುದಾಗಿ ಹೇಳಲಾದ ಸ್ಥಳಗಳಲ್ಲಿ ಮಹಜರು ನಡೆಸಲಾಗಿದ್ದು, ಒಟ್ಟು 13 ಜಾಗಗಳನ್ನು ದೂರುದಾರ ತೋರಿಸಿದ್ದಾರೆ.

ಇಂದು ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಆರಂಭಗೊಂಡಿದೆ. ದೂರುದಾರನನ್ನೂ ಎಸ್‌ಐಟಿ ಸ್ಥಳಕ್ಕೆ ಕರೆತಂದಿದೆ. ವಿಶೇಷ ತನಿಖಾ ತಂಡ ಸೋಮವಾರ ಸಂಜೆ 6 ಗಂಟೆ ತನಕ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಮಹತ್ವದ ಮಹಜರು ಕಾರ್ಯ ನಡೆಸಿತು.

ದೂರುದಾರ ಅನಾಮಿಕ ವ್ಯಕ್ತಿಯನ್ನು ಮುಸುಕುಧಾರಿಯಾಗಿ ಕರೆತಂದ ಎಸ್‌ಐಟಿ ತಂಡ ಬೆಳಗ್ಗಿನಿಂದ ಸಂಜೆಯವರೆಗೂ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶದ ನಿಗೂಢ ಸ್ಥಳಗಳಿಗೆ ಕರೆದೊಯ್ದು ಮಹಜರು ಕಾರ್ಯ ನಡೆಸಿತು. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ 13 ಜಾಗಗಳನ್ನು ಎಸ್‌ಐಟಿ ಅಧಿಕಾರಿಗಳಿಗೆ ದೂರುದಾರ ತೋರಿಸಿದ್ದಾರೆ.

ಈ ಜಾಗಗಳಲ್ಲಿ ರಾತ್ರಿಯಿಡಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಇದೀಗ ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಆರಂಭಗೊಂಡಿದೆ.

WhatsApp Group Join Now
Telegram Group Join Now
Share This Article
error: Content is protected !!