Ad imageAd image

ಧರ್ಮಸ್ಥಳ ಪ್ರಕರಣ ಬಿಜೆಪಿಯದೇ ಷಡ್ಯಂತ್ರ : ಡಿ. ಕೆ ಶಿವಕುಮಾರ್ 

Bharath Vaibhav
ಧರ್ಮಸ್ಥಳ ಪ್ರಕರಣ ಬಿಜೆಪಿಯದೇ ಷಡ್ಯಂತ್ರ : ಡಿ. ಕೆ ಶಿವಕುಮಾರ್ 
DKS
WhatsApp Group Join Now
Telegram Group Join Now

ಬೆಂಗಳೂರು: ಪ್ರಸ್ತುತ ಎಸ್ ಐಟಿ (SIT) ಮಾಡಿರುವ ತನಿಖೆ ಬಗ್ಗೆ ಬಿಜೆಪಿ (BJP) ನಾಯಕರಿಗೆ ಸಮಾಧಾನ ಇಲ್ಲವೇ? ಬಿಜೆಪಿಯಲ್ಲಿ ಆಂತರಿಕವಾಗಿ ಎರಡು ಬಣಗಳು ಕಚ್ಚಾಡುತ್ತಿವೆ.

ಇದೆಲ್ಲವೂ ಅವರದ್ದೇ ಷಡ್ಯಂತ್ರ. ಎಸ್ ಐಟಿ ರಚನೆ ಮಾಡಬೇಕು ಎಂದು ಹೇಳಿದವರು ಅವರೇ, ಇದನ್ನು ಸ್ವಾಗತ ಮಾಡಿದವರೂ ಅವರೇ.ಈಗ ನಾಟಕ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇಂದು (ಸೆ.1) ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಧರ್ಮಸ್ಥಳದ ಪ್ರಕರಣವನ್ನು ಬಿಜೆಪಿ ನಾಯಕರು ರಾಜಕೀಯಗೊಳಿಸಿರುವ ಬಗ್ಗೆ,ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ ಡಬಲ್ ಸ್ಟ್ಯಾಂಡರ್ಡ್ ಬಗ್ಗೆ ಕಿಡಿಕಾರಿದ್ದಾರೆ.

ಇನ್ನು ಧರ್ಮಸ್ಥಳ ಪ್ರಕರಣದಲ್ಲಿ ಎನ್.ಐ.ಎ ತನಿಖೆಗೆ ಬಿಜೆಪಿಯವರು ಒತ್ತಾಯಿಸಿರುವ ಬಗ್ಗೆ ಕೇಳಿದಾಗ, “ಧರ್ಮಸ್ಥಳಕ್ಕೆ ನ್ಯಾಯ ಸಿಗಬೇಕು ಎಂದು ಬಿಜೆಪಿ ಎಂದೂ ಬಾಯಿಬಿಚ್ಚಲಿಲ್ಲ. ಬಿಜೆಪಿಯ ಮೂಲ ಕಾರ್ಯಕರ್ತರೇ ಧರ್ಮಸ್ಥಳದ ಮೇಲೆ ಕೆಟ್ಟ ಹೆಸರು ತರಬೇಕು ಎಂದು ಮಾಡಿರುವ ಕೆಲಸವಿದು” ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!