Ad imageAd image

ಧರ್ಮಸ್ಥಳದಲ್ಲಿ ನಕಲಿ ದೇವಮಾನವ ಕೂಗು : ಯುವಕ – ಭಕ್ತರು ನಡುವೆ ಗಲಾಟೆ

Bharath Vaibhav
ಧರ್ಮಸ್ಥಳದಲ್ಲಿ ನಕಲಿ ದೇವಮಾನವ ಕೂಗು : ಯುವಕ – ಭಕ್ತರು ನಡುವೆ ಗಲಾಟೆ
WhatsApp Group Join Now
Telegram Group Join Now

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಹೋರಾಡುತ್ತಿರುವವರು ಆಶಯ ವ್ಯಕ್ತಪಡಿಸಿದ್ದಾರೆ. ಇನ್ಟಾಗ್ರಾಮ್‌ನಲ್ಲಿ ಎರಡು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ʼಕಬ್ಜ ಶರಣ್‌ʼ ಎಂಬಾತ ಸೌಜನ್ಯಗೆ ನ್ಯಾಯ ಸಿಗಲಿ ಎಂದು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಇಂದು ಕಬ್ಜ ಶರಣ್‌ ಹಾಗೂ ಆತನ ಜತೆ ಮಾರ್ಗ ಮಧ್ಯದಲ್ಲಿ ಇನ್ನೂ ಕೆಲವರು ಪಾದಯಾತ್ರೆಗೆ ಸೇರಿಕೊಂಡವರು ಧರ್ಮಸ್ಥಳ ತಲುಪಿದ್ದಾರೆ.  ಪ್ರವೇಶ ದ್ವಾರದ ಬಳಿಯೇ ಭಕ್ತರು ಅಡ್ಡಗಟ್ಟಿದ್ದಾರೆ.

ಪಾದಯಾತ್ರೆ ವೇಳೆ ನಕಲಿ ದೇವಮಾನವ ಎಂದು ಘೋಷಣೆ ಕೂಗಿದ ಕಾರಣ ಅಸಮಾಧಾನಗೊಂಡ ಭಕ್ತರು – ಕಬ್ಜ ಶರಣ್‌ ಹಾಗೂ ತಂಡದ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ಇನ್ನು ಈ ಕುರಿತು ವಿಡಿಯೋ ಮೂಲಕ ಕಬ್ಜ ಶರಣ್‌ ಪ್ರತಿಕ್ರಿಯಿಸಿದ್ದು, ನಾವು ನಕಲಿ ದೇವಮಾನವ ಘೋಷಣೆ ಕೂಗಿದ್ದೇವೆ ಎಂದು ಆರೋಪಿಸಿ ನಮ್ಮನ್ನು ತಡೆಯುತ್ತಿದ್ದಾರೆ, ನಮ್ಮದು ನ್ಯಾಯದ ಪರವಾದ ಹೋರಾಟ, ನಾನು ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಬೇಡಿಕೊಳ್ಳಲು ಬಂದಿದ್ದೇನೆ ಹೊರತು ಬೇರೆ ಉದ್ದೇಶವಿಲ್ಲ ಎಂದು ಹೇಳಿಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!