Ad imageAd image

ಧರ್ಮಸ್ಥಳದಲ್ಲಿ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

Bharath Vaibhav
ಧರ್ಮಸ್ಥಳದಲ್ಲಿ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಸಿಂಧನೂರು : ಜುಲೈ 23 ಧರ್ಮಸ್ಥಳ ಸಾಮೂಹಿಕ ಅಪಹರಣ ಅತ್ಯಾಚಾರ ಕೊಲೆ ಪ್ರಕರಣಗಳ ಪ್ರಮುಖ ಅಪರಾಧಿಗಳನ್ನು ಕೂಡಲೇ ಬಂಧಿಸಿ ಪ್ರಕರಣಗಳ ತನಿಖೆಯನ್ನು ಉನ್ನತ ನ್ಯಾಯಾಂಗಕ್ಕೆ ವಹಿಸಬೇಕೆಂದು ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ನಗರದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟಸಿ ಮಾನ್ಯ ತಾಸಿಲ್ದಾರ್ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿ ಮಾತನಾಡಿ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಮಂಜುನಾಥ ಧರ್ಮಸ್ಥಳ ಸುಕ್ಷೇತ್ರ ಸುತ್ತಮುತ್ತ ನಡೆದಿವೇ ಎನ್ನಲಾದ ಸರಣಿ ಸಾವುಗಳ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಈಗಾಗಲೇ ಪ್ರಕರಣಗಳ ತನಿಖೆ ರಚಿಸಲಾಗಿರುವ ವಿಶೇಷ ತನಿಕಾ ತಂಡ ಎಸ್ಐಟಿ, ಮೇಲೆ ರಾಜಕೀಯ ಪ್ರಭಾವದಿಂದ ಸತ್ಯಾಂಶ ಹೊರಬರುವ ಸಾಧ್ಯತೆ ಕಡಿಮೆ ಇದೆ.

ಪ್ರಕರಣ ಗಂಭೀರ ಸ್ವರೂಪವಾಗಿದ್ದು ಹಾಗೂ ಪ್ರಭಾವಿ ಮನೆತನ ಮತ್ತು ಪ್ರಭಾವಿ ರಾಜಕೀಯ ಹಿನ್ನೆಲೆ ಹೊಂದಿರುತ್ತದೆ ಅಲ್ಲದೆ ಪ್ರಕರಣ 1976 ರಿಂದ ಇಲ್ಲಿವರೆಗೆ ಧರ್ಮಸ್ಥಳದಲ್ಲಿ ನಡೆದಿರುವ 400ಕ್ಕೂ ಹೆಚ್ಚು ವಿದ್ಯಾರ್ಥಿನಿ ಮಹಿಳೆಯರ ನಾಪತ್ತೆ ಅಪರಣ ಅತ್ಯಾಚಾರ ಹಾಗೂ ಕಗ್ಗೋಲಿಯಂತಹ ಭೀಕರ ನರಮೇಧ ವಾಗಿರುತ್ತದೆ ಈ ನರಮೇದಕ್ಕೆ ಇದೇ ಸುಕ್ಷೇತ್ರದಲ್ಲಿ ಹಲವು ದಶಕಗಳಿಂದ ಕೆಲಸ ಮಾಡಿದ ವ್ಯಕ್ತಿ ಒಬ್ಬರು ದೂರುದಾರಾಗಿರುತ್ತಾರೆ ಸಾಲು ಸಾಲು ಅಪರಾಧಿ ಪಕರಣಗಳು ಬಯಲಿಗೆ ಬರುತ್ತವೆ ಇದರ ಪರಿಣಾಮದಿಂದ ನೂರಾರು ಸಂಖ್ಯೆಯ ಗಣ್ಯ ಮತ್ತು ಅತಿ ಗಣ್ಯರು ಜೈಲಿಗೆ ಹೋಗುತ್ತಾರೆ.

ಈ ಪ್ರಕರಣ ಗಾಂಭೀರ್ಯವಾಗಿದೆ ಆದ್ದರಿಂದಾಗಿ ಸಿದ್ದರಾಮಯ್ಯನವರು ಘೋಷಿಸಿದ ಎಸ್ಐಟಿ ಮೇಲೆ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷಕ್ಕೆ ನಂಬಿಕೆ ಇರುವುದಿಲ್ಲ ಈ ಕಾರಣಕ್ಕಾಗಿ ಎಸ್ಐಟಿ,ಬದಲು ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸ ಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ: ಎಂ, ಗಂಗಾಧರ್ ರಾಜ್ಯ ಸಮಿತಿ ಸದಸ್ಯರು, ಎಚ್ ಆರ್. ಹೊಸಮನಿ ಜಿಲ್ಲಾ ಸಮಿತಿ ಸದಸ್ಯರು, ಹನುಮಂತಪ್ಪ ಕೋಡಿಹಾಳ ತಾಲೂಕು ಉಪಾಧ್ಯಕ್ಷರು ರೈತ ಸಂಘ, ರುಕ್ಮಿಣಿ ದೋಬಿ ಗಲ್ಲಿ ತಾಲೂಕು ಸದಸ್ಯರು ಸಿಪಿಐಎಂಎಲ್. ಹುಲುಗಪ್ಪ ಬಳ್ಳಾರಿ ತಾಲೂಕು ಸದಸ್ಯರು ಸಿಪಿಐ ಎಂಎಲ್. ಮುದಿಯಪ್ಪ ಹನುಮನಗರ ಕ್ಯಾಂಪ್ ತಾಲೂಕ ಸದಸ್ಯರು ಸಿಪಿಐಎಂ ಎಲ್, ಇನ್ನು ಅನೇಕರಿದ್ದರು.

ವರದಿ : ಬಸವರಾಜ ಬುಕ್ಕಾನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!