ಬೆಳಗಾವಿ: ಹೌದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ಆರ್ಥಿಕ ಸಹಾಯದಲ್ಲಿ ಬೆಳಗಾವಿ ಜಿಲ್ಲೆಯ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಕಡೊಳ್ಳಿ ಗ್ರಾಮದ 5 ದಶಕಗಳಿಂದ ಊಳು ತುಂಬಿ ಪಾಳು ಬಿದ್ದಿದ್ದ ಕೆರೆಗೆ ಪರಮಪೂಜ್ಯ ಪದ್ಮ ವಿಭೂಷಣ ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಾ. ಹೇಮಾವತಿ ವಿ ಹೆಗ್ಡೆಯವರ ಮಾರ್ಗದರ್ಶನದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ 8 ಲಕ್ಷ 33 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಇಂದು ಹಸ್ತಾಂತರ ವಾಯಿತು.
ಬೆಳಗಾವಿ ಲೋಕ ಸಂಸದರು ಹಾಗೂ ಮಾಜಿ ಮುಖ್ಯ ಮಂತ್ರಿಗಳು ಆದ ಜಗದೀಶ್ ಶೆಟ್ಟರ್, ಶ್ರೀ ಅಭಿನವ ಚನ್ನಮಲ್ಲಯ್ಯ ಸ್ವಾಮೀಜಿ ಹಾಗೂ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ದಯಾಶೀಲಾ ಹಾಗೂ ವಕೀಲ ಸೋನೆರ, ನಿರ್ದೇಶಕ ಸತೀಶ್ ನಾಯಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದವ್ವ ಹೊಸೂರ, ಮಾಜಿ ಶಾಸಕ ಸಂಜಯ ಪಾಟೀಲ್, ಧನಂಜಯ ಜಾಧವ್, ಮುಖಂಡ ಚೇತನ್ ಅಂಗಡಿ ಇವರ ನೇತೃತ್ವದಲ್ಲಿ ಈ ಪುನಶ್ಚೇತನ ಗೊಂಡ ಕೆರೆಯು ಉದ್ಘಾಟನೆ ಗೊಂಡಿತು. ಈ ಸಂದರ್ಭದಲ್ಲಿ ಎಲ್ಲಾ ಗಣ್ಯರನ್ನು ಸನ್ಮಾನ ಮಾಡಲಾಯಿತು.
ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಶ್ರೀ ಧರ್ಮಸ್ಥಳ ಯೋಜನೆಯ ರೈತ ಪರ ಕೆಲಸವನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕಿ ದಯಾ ಶೀಲರವರು ಮಾತಾನಾಡಿ ಈ ಧರ್ಮಸ್ಥಳ ಸಂಸ್ಥೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮದ ಧರ್ಮಸ್ಥಳ ಸಂಘದ ಕಾರ್ಯಕರ್ತೆಯರು ಕುಂಭಗಳ ಮೂಲಕ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ಸಂಸ್ಥೆಯ ಅಧಿಕಾರಿಗಳು ಆದ ಯೋಗೇಶ್, ನಿಂಗರಾಜು, ರಿಯಾಜ್ ದರ್ಗಾಡ್, ಪ್ರಮೀಳಾ ಸೇರಿದಂತೆ ಕುಕ ಡೊಳ್ಳಿ, ಗಜಪತಿ, ಅಂಕಲಗಿ ಹಾಗೂ ಹಿರೇಬಾಗೇವಾಡಿ ಭಾಗದ ಗಣ್ಯರು ಉಪಸ್ಥಿತರಿದ್ದರು. ಅಂತೂ ಇಂತೂ ದೀರ್ಘಕಾಲದಿಂದ ಊಳು ತುಂಬಿ ಪಾಳು ಬಿದ್ದಿದ್ದ ಕುಕಡೊಳ್ಳಿ ಕೆರೆಗೆ ಪುನಶ್ಚೇತನ ಕೊಟ್ಟ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.
ವರದಿ: ಬಸವರಾಜು