ಮಂಗಳೂರು: ಧರ್ಮಸ್ಥಳದಲ್ಲಿ ಅಸಹಜ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ತನಿಖೆ ಚುರುಕುಗೊಳಿಸಿದ್ದು, ಇಂದು ನಡೆದ ಶೋಧಕಾರ್ಯದಲ್ಲಿ ಯಾವುದೇ ಕಳೇಬರಹ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಇಂದು 9ನೇ ಹಾಗೂ 10ನೇ ಪಾಯಿಂಟ್ ಗಳಲ್ಲಿ ಶೋಧಕಾರ್ಯ ನಡೆಸಲಾಯಿತು. ಮಿನಿ ಅರ್ಥ ಮೂವರ್ ಮೂಲಕ ಮಣ್ಣು ಅಗೆದರೂ ಯಾವುದೇ ರೀತಿಯ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ 9 ಹಾಗೂ 10ನೇ ಸ್ಥಳಗಳಲ್ಲಿ ಶೋಧಕಾರ್ಯ ಮುಕ್ತಾಯವಾಗಿದೆ.
ನಾಳೆ ಭಾನುವಾರ ರಜಾ ದಿನವಾಗಿರುವುದರಿಂದ ಸೋಮವಾರ ಮತ್ತೆ ಶೋಧಕಾರ್ಯ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ನಾಳೆ ಭಾನುವಾರ ರಜಾ ದಿನವಾಗಿರುವುದರಿಂದ ಸೋಮವಾರ ಮತ್ತೆ ಶೋಧಕಾರ್ಯ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.