ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗುತ್ತಿದ್ದು, ಇಂದು ( ಜುಲೈ 29 ) ಸಾಕ್ಷಿ ದೂರುದಾರನ ಸಮ್ಮುಖದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ನಡೆದಿದೆ.
ನಿನ್ನೆ ಸಾಕ್ಷಿ ದೂರುದಾರನನ್ನು ಕರೆತಂದು ಸ್ಥಳ ಮಹಜರು ನಡೆಸಿದ ಎಸ್‌ಐಟಿ ಅಧಿಕಾರಿಗಳು 13 ಸ್ಥಳಗಳನ್ನು ಮಾರ್ಕ್ ಮಾಡಿದ್ದರು.ಇಂದು ಹಾರೆ, ಪಿಕಾಸುಗಳನ್ನು ತಂದು ಕಾರ್ಮಿಕರು ಗುರುತಿಸಿದ್ದ ಮೊದಲ ಸ್ಥಳದಲ್ಲಿ ಗುಂಡಿ ಅಗೆದಿದ್ದು, ಈ ಜಾಗದಲ್ಲಿ ಏನೂ ಪತ್ತೆಯಾಗಿಲ್ಲ ಎನ್ನಲಾಗಿದೆ.
ಅನಾಮಿಕ ದೂರುದಾರ ಇನ್ನಷ್ಟು ಅಡಿ ಅಗೆಯುವಂತೆ ಸಲಹೆ ನೀಡುತ್ತಿದ್ದು, ಸದ್ಯ ಗುಂಡಿ ಅಗೆಯುವ ಪ್ರಕ್ರಿಯೆ ಭಾರೀ ಕುತೂಹಲ ಮೂಡಿಸಿದೆ.
ಮಳೆಯಲ್ಲೂ ಸಹ ಕಾರ್ಯಾಚರಣೆ ಮುಂದುವರಿದಿದ್ದು, ಒಟ್ಟು 13 ಸ್ಥಳಗಳ ಪೈಕಿ ಉಳಿದ ಸ್ಥಳಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.