ಧಾರವಾಡ: ಕಾರ್ಯಕ್ರಮ ಒಂದರಲ್ಲಿ ಅತಿಥಿಯಾಗಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲು ತೀವ್ರ ವಿರೋಧ ವ್ಯಕ್ತವಾಗಿದೆ.
ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಚಕ್ರವರ್ತಿ ಉಪಸ್ಥಿತಿಗೆ ವಿರೋಧ ವ್ಯಕ್ತವಾಗಿದೆ.
ತಮ್ಮ ಭಾಷಣದ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡುವವರನ್ನು ಕರೆತಂದು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಬಾರದು ಎಂದು ವಿರೋಧ ವ್ಯಕ್ತವಾಗಿದೆ.
ವಿದ್ಯಾರ್ಥಿಗಳ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೋಲಿಬೆಲೆ ಭಾಗಿಯಾಗಲು ದಲಿತ ಸಂಘಟನೆ, ಕೃಷಿ ವಿವಿ ಬೋರ್ಡ್ ಸದಸ್ಯರು ವಿರೋಧ ವ್ಯಕ್ತಪಡಿಸಿ ವಿಶ್ವ ವಿದ್ಯಾಲಯದ ಗೇಟ್ ಮುಂದೆ ಧರಣಿ ನಡೆಸಿದ್ದು, ತೀವ್ರ ವಿರೋಧದ ಹಿನ್ನಲೆ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಕೃಷಿ ವಿವಿ ಕಾರ್ಯಕ್ರಮಕ್ಕೆ ಯಾವುದೇ ಶಾಸಕರು ಅಥವಾ ಸಚಿವರನ್ನು ಕರೆಯದೆ ಚಕ್ರವರ್ತಿ ಸೂಲಿಬೆಯನ್ನು ಕರೆದ ಉದ್ದೇಶವೇನು ಎಂದು ಪ್ರತಿಭಟನಾಕಾರರು ವಿವಿ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಕೆಲ ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಗೇಟ್ ಏರಿ ಪ್ರತಿಭಟನೆ ನಡೆಸಿದ ಕಾರಣ ಹೈಡ್ರಾಮಾ ಸೃಷ್ಟಿಯಾಗಿದೆ.




