ಬೈಲಹೊಂಗಲ: ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಬೈಲಹೊಂಗಲದಲ್ಲಿ ನಡೆದ ಆತ್ಮ ತಾಲೂಕು ಸಲಹಾ ಸಮಿತಿ ಹಾಗೂ ಕೃಷಿಕ ಸಮಾಜದ ಸಭೆಯಲ್ಲಿ ಕೃಷಿಕ ಸಮಾಜ ಅಧ್ಯಕ್ಷರಾದ ಗುರು ಮೆಟಗುಡ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಬರುವ 13 ,14,15, 16ನೇ ದಿನಾಂಕಗಳಂದು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ 4 ದಿನಗಳ ಕಾಲ ಜರುಗುವ ಕೃಷಿ ಮೇಳಕ್ಕೆ ಎಲ್ಲ ತಾಲೂಕಿನ ರೈತ ಬಾಂಧವರು ಭಾಗಿಯಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಸಹಾಯಕ ಕೃಷಿ ನಿರ್ದೇಶಕರು ಶ್ರೀ ಬಸವರಾಜ ದಳವಾಯಿ ಅವರು ಮಾತನಾಡಿ ಪ್ರಸ್ತುತ ಹಂಗಾಮಿನ ಕೃಷಿ ಚಟುವಟಿಕೆಗಳ ಕುರಿತು ವಿಸ್ತಾರವಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಹೈನುಗಾರಿಕೆ ಅಧಿಕಾರಿಗಳಾದ ಈ ವಿರುಪಾಕ್ಷ ಅಡ್ಡನಿಗಿ ಅವರು ರೇಬಿಸ್ ರೋಗ ತಡೆಗಟ್ಟುವುದರ ಕುರಿತು ಮಾಹಿತಿ ನೀಡಿದರು. ಆತ್ಮ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಶ್ರೀ ಚಂದ್ರಕಾಂತ್ ಮರಡಿ ಅವರು ಕಾರ್ಯಕ್ರಮ ನಿರೂಪಿಸಿದರು . ಕೃಷಿಕ ಸಮಾಜದ ಉಪಾಧ್ಯಕ್ಷರಾದ ಶಂಕರಗೌಡ ದೊಡ್ಡಗೌಡ್ರು ಜಿಲ್ಲಾ ಪ್ರತಿನಿಧಿಗಳಾದ ನಾಗನಗೌಡ ಭರಮಗೌಡ್ರು ಖಜಾಂಚಿಗಳಾದ ಶಿವಪುತ್ರ ತಟವಾಟಿ ಹಾಗೂ ಸರ್ವ ಕೃಷಿಕ ಸಮಾಜದ ಸದಸ್ಯರು ಮತ್ತು ಆತ್ಮ ತಾಲೂಕು ಸಲಹಾ ಸಮಿತಿ ಸದಸ್ಯರು ಮತ್ತು ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.




