ಧಾರವಾಡ : ದಾನದಲ್ಲಿ ಶ್ರೇಷ್ಠದಾನ ಎಂದರೆ ನೇತ್ರದಾನ, ಅಂಗಾಂಗ ದಾನ ಎಂಬ ಮಾತಿದೆ. ಇದೀಗ ಇದಕ್ಕೆ ಪೂರಕವಂತೆ ರಾಜ್ಯದ ಧಾರವಾಡ ಜಿಲ್ಲೆ ಹೊಸ ಸಾಧನೆಯೊಂದನ್ನು ಮಾಡಿದ್ದು, ಅಂಗಾಂಗದಲ್ಲಿಯೇ ದೇಶಕ್ಕೆ ಎರಡನೇ ಸ್ಥಾನವನ್ನು ಪಡೆದಿದೆ.
ದೇಶದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಿಂದ ಅನೇಕ ಜನ ಸಾವನ್ನಪ್ಪಿದರೆ, ಇನ್ನು ಕೆಲವು ಮೆದುಳು ನಿಷ್ಕ್ರಿಯವಾಗಿ ಕೋಮಾಗೆ ಹೋಗಿರುತ್ತಾರೆ.ಬಳಿಕ ಆತ ಮೊದಲಿನಂತೆ ಆಗೋಕೆ ಸಾಧ್ಯವೇ ಇಲ್ಲ ಎಂದಾಗ ದೇಹದ ಅಂಗಾಂಗವನ್ನು ದಾನ ಮಾಡಲಾಗುತ್ತದೆ.
ಇದೀಗ ಇಂತಹ ಪಟ್ಟಿಯಲ್ಲಿ ದೇಶದಲ್ಲೇ ಧಾರವಾಡ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ. ಅಷ್ಟಕ್ಕೂ ಧಾರವಾಡದಲ್ಲಿ ಅಷ್ಟೊಂದು ಜನ ಅಂಗಾಂಗ ದಾನ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಬಹುದು, ಆದರೆ ಅದು ಅಂಗಾಂಗ ದಾನ ಮಾಡಲು ಎಚ್ಚಿಸುವ ಪಟ್ಟಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶಗಳ ದಾನ ಮಾಡಲು ಇಚ್ಚಿಸುವವರಿಗೆ ವೆಬ್ ಸೈಟ್ ವೊಂದನ್ನು ಮಾಡಲಾಗಿದೆ. ಒಂದು ವೇಳೆ ಯಾರಿಗಾದರೂ ದಾನ ಮಾಡಲು ಇಷ್ಟವಿದ್ದರೆ ಅಂತವರು ತಮ್ಮ ಹೆಸರನ್ನು ಈ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಇದರಲ್ಲಿ ನೋಂದಣಿ ಮಾಡಿಕೊಳ್ಳುವವರು, ಒಂದು ವೇಳೆ ಮೆದುಳು ನಿಷ್ಕ್ರಿಯಗೊಂಡರೆ ನಾನು ನನ್ನ ಅಂಗಾಂಗ ಹಾಗೂ ಅಂಗಾಂಶಗಳನ್ನು ದಾನ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಬೇಕು ಹಾಗೂ ಇದಕ್ಕೆ ಸಂಪೂರ್ಣ ಒಪ್ಪಿಗೆಯಿಂದ ಸಹಿ ಹಾಕಬೇಕು. ಈ ನೋಂದಣಿಯಲ್ಲಿ ಧಾರವಾಡ ಜಿಲ್ಲೆ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ.
ಇತ್ತೀಚೆಗೆ ವರದಿಯ ಪ್ರಕಾರ, ಏಪ್ರಿಲ್ ತಿಂಗಳ ಅಂತ್ಯದವರೆಗೆ ರಾಜ್ಯದಲ್ಲಿ 35,868 ಜನರು ಅಂಗಾಂಗ ದಾನಕ್ಕೆ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಧಾರವಾಡ ಜಿಲ್ಲೆಯ 8,177 ಜನರು ತಮ್ಮ ಅಂಗಾಂಗವನ್ನು ದಾನಕ್ಕೆ ನೋಂದಣಿ ಮಾಡಿಸಿದ್ದಾರೆ.
ಈ ಮೂಲಕ ಧಾರವಾಡ ಜಿಲ್ಲೆಯ ಅಂಗಾಂಗ ದಾನದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.




