Ad imageAd image

ಧಾರವಾಡ ಆ.22ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

Bharath Vaibhav
ಧಾರವಾಡ ಆ.22ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ
WhatsApp Group Join Now
Telegram Group Join Now

ಅಮ್ಮೀನಭಾವಿ:- ನೀರು ಶುದ್ಧೀಕರಣ ಘಟಕದಿಂದ ಧಾರವಾಡ ನಗರಕ್ಕೆ ನೀರು ಸರಬರಾಜು ಮಾಡುವ 950 ಮಿ.ಮೀ. ಎಂ.ಎಸ್ ವ್ಯಾಸದ ಕಚ್ಚಾ ನೀರು ಕೊಳವೆ ಮಾರ್ಗ ಹಾಗೂ 750 ಮಿ.ಮೀ. ಎಂ.ಎಸ್ ವ್ಯಾಸದ ಶುದ್ಧ ನೀರಿನ ಕೊಳವೆ ಮಾರ್ಗದಲ್ಲಿ ಪೈಪಲೈನ್ ಸೋರಿಕೆಯಾಗುತ್ತಿದ್ದು, ಪೈಪಲೈನ್ ದುರಸ್ಥಿ ಕಾರ್ಯ ತುರ್ತಾಗಿ ಕೈಗೊಳ್ಳಬೇಕಾಗಿರುವುದರಿಂದ ಆಗಸ್ಟ್ 22 ರಂದು ಧಾರವಾಡ ನಗರದ ಎಲ್ಲ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿಳಂಬವಾಗಿ ನೀರು ಪೂರೈಕೆ ಮಾಡಲಾಗುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!