ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಗೆ ನಿನ್ನೆ ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಮುಗಿದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವೇ ಅವರ ಕ್ರಿಕೆಟ್ ಜೀವನದ ಕಡೆಯ ಕ್ಷಣದಂತೆ ಕಂಡಿತು.
ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತಲ್ಲದೇ ಪಂದ್ಯಾವಳಿಯಿಂದಲೂ ಹೊರ ಬಿತ್ತು ಇಷ್ಟು ಮಾತ್ರವಲ್ಲದೇ ಈ ಬಾರಿಯ ೈಪಿಎಲ್ ನಲ್ಲಿ ಚೆನ್ನೈನಲ್ಲಿಯೂ ಆಡುವ ಕಡೆಯ ಪಂದ್ಯ ಇದಾಗಿದೆ. ಇನ್ನುಳಿದ ಪಂದ್ಯಗಳನ್ನು ಚೆನ್ನೈ ಹೊರ ಮೈದಾನಗಳಲ್ಲಿ ಆಡಲಿದ್ದು, ಧೋನಿಗೆ ಇನ್ನು ಕ್ರಿಕೆಟ್ ಜೀವನದ ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ ತಂಡದ ಮಾಲೀಕರೊಂದಿಗೆ ಧೋನಿ ಕಳೆದ ರಾತ್ರಿ ಭಾವನಾತ್ಮಕವಾಗಿ ಮಾತನಾಡಿದರು.




