ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಸವದತ್ತಿ ಗ್ರಾಮ ಪಂಚಾಯತಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ ಎಂದು ಸವದತ್ತಿ ಗ್ರಾಮದ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಧೂಳಗೌಡ ಪಾಟೀಲ್ ಅವರು ಸ್ಪಷ್ಟನೆ ನೀಡಿದರು.
ರವಿವಾರ ಸವದತ್ತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿಯ ಎಲ್ಲ ಅಭಿವೃದ್ಧಿ ಕೆಲಸಗಳು ದಾಖಲೆ ಸಮೇತ ಪಾರದರ್ಶಕವಾಗಿ ನಡೆದಿವೆ. ಬೇಕಿದ್ದಲ್ಲಿ ಎಲ್ಲ ದಾಖಲೆಗಳನ್ನು ಸಾರ್ವಜನಿಕರಿಗೆ ತೋರಿಸಲು ಸಿದ್ಧವಿದ್ದೇವೆ ಎಂದು ಹೇಳಿದರು.
ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಗ್ರಾಮಸ್ಥರ ಅನುಕೂಲಕ್ಕಾಗಿ ಪಂಚಾಯಿತಿಯಿಂದ ಆಂಬ್ಯುಲೆನ್ಸ್ ಹಾಗೂ ಶವ ಸಾಗಣೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮ ಅಭಿವೃದ್ಧಿ ಮಾಡುತ್ತವೆ ಎಂದು ತಿಳಿಸಿದರು.
ಕೆಲವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಪಂಚಾಯಿತಿಯ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅದರ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸವಾಲು ಹಾಕಿದರು.
ಗ್ರಾಮ ಪಂಚಾಯಿತಿಯ ಮೇಲೆ ವಿನಾಕಾರಣ ಸುಳ್ಳು ಆರೋಪ ಮಾಡಿ ಸುದ್ದಿ ಹರಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ನಂತರ ಗ್ರಾಮಸ್ಥರ ಮಾತನಾಡಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ರಾಮಚಂದ್ರ ಕಲ್ಲಪ್ಪ ಕಾಟೆ, ಉಪಾಧ್ಯಕ್ಷರಾದ ಶ್ರೀ ಅಜಾದ ಇಮಾಮ್ ತಾಷೇವಾಲೆ, ಗ್ರಾಮದ ಹಿರಿಯರಾದ ಶ್ರೀ ತಾತ್ಯಾಸಾಬ ದಾದು ಕಾಟೆ, ಶ್ರೀ ಜಿನೇಶ್ವರ ಮಗದುಮ್ಮ,ಶ್ರೀ ದಶರಥ ಕಾಟೆ, ಶ್ರೀ ಅಣ್ಣಾಸಾಬ ಕೂಗೆ, ಶ್ರೀ ಅಣ್ಣಾಸಾಬ ಶ್ರೀಮಂತ ಹಂಜೆ, ಶ್ರೀ ರಾಜು ಖಾಂಡೇಕರ, ಶ್ರೀ ರಾವಸಾಬ ಖಾಂಡೇಕರ, ಶ್ರೀ ಶಿವಣ್ಣ ಕೊರವಿ, ಶ್ರೀ ಭೈರು ಚೌಗಲಾ, ಶ್ರೀ ಕೇದಾರಿ ಡೊಂಗರೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸಂಗಮೇಶ ನ್ಯಾಮಗೌಡ ಹಾಗೂ ಸಿಬ್ಬಂದಿ, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು,
ವರದಿ: ರಾಜು ಮುಂಡೆ




